ನ್ಯೂಸ್ ನಾಟೌಟ್ : ಕಿಚ್ಚ ಸುದೀಪ್ ಹೇಳಿಕೆ ವಿವಾದಕ್ಕೆ ಸಂಬಂಧ ಪಟ್ಟ ಹಾಗೆ ನಿರ್ದೇಶಕ ಪ್ರೇಮ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ನನ್ನ ಮುಂದೆ ಸುದೀಪ್ ಅವರು ದರ್ಶನ್ ಬಗ್ಗೆ ಆಗಲಿ, ದರ್ಶನ್ ಕುಟುಂಬದ ಬಗ್ಗೆ ಆಗಲಿ ಮಾತನಾಡಿಲ್ಲ. ಮಧ್ಯ ದಲ್ಲಿ ಯಾರೋ ಕಿತಾಪತಿ ಮಾಡುತ್ತಾರೆ. ಅದಕ್ಕೆ ದರ್ಶನ್ ಮತ್ತು ಸುದೀಪ್ ಅಭಿಮಾ ನಿಗಳು ಕಿವಿಗೊಡಬಾರದು ಎಂದು ನಿರ್ದೇಶಕ ಪ್ರೇಮ್ ಮನವಿ ಮಾಡಿದ್ದಾರೆ.
ನಟ ಸುದೀಪ್ ಅವರ ಹುಬ್ಬಳ್ಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರೇಮ್, ಸುದೀಪ್ ಒಳ್ಳೆಯ ಮಾತು ಹೇಳಿದ್ದಾರೆ. ಸಿನಿಮಾ ಚೆನ್ನಾಗಿ ಇದ್ದರೆ ಮಾತ್ರ ಫ್ಯಾನ್ಸ್ ಬರುತ್ತಾರೆ, ಚೆನ್ನಾಗಿ ಇಲ್ಲದಿದ್ದರೆ ಯಾರೂ ಬರಲ್ಲ ಅಂತ ಹೇಳಿದ್ದಾರೆ. ಇಲ್ಲಿ ಹೀರೋ, ಹೀರೋಗಿಂತ ಸಿನಿಮಾ ದೊಡ್ಡದು ಎಂದರು.
ಸುದೀಪ್ ಮತ್ತು ದರ್ಶನ್ ಅವರ ಮನಸ್ತಾಪಕ್ಕೆ ಅವರ ವೈಯಕ್ತಿಕ ಕಾರಣ ಇರಬಹುದು. ಆದರೆ, ಯಾವತ್ತೂ ಪರಸ್ಪರ ಕೆಟ್ಟದಾಗಿ ಬಯ್ದುಕೊಂಡಿಲ್ಲ. ನನಗೆ ಅವರು ಆತ್ಮೀಯರಾದ ಕಾರಣ ತುಂಬ ಚೆನ್ನಾಗಿ ಗೊತ್ತಿದ್ದಾರೆ. ಸುದೀಪ್ ಜೊತೆ ಸಿನಿಮಾ ಮಾಡುತ್ತೇನೆ ಎಂದಾಗ ಚೆನ್ನಾಗಿ ಮಾಡಿ ಅಂತ ದರ್ಶನ್ ಹೇಳುತ್ತಾರೆ. ದರ್ಶನ್ ಜೊತೆ ಸಿನಿಮಾ ಮಾಡುತ್ತೇನೆ ಅಂತ ಸುದೀಪ್ ಗೆ ಹೇಳಿದಾಗ ಚೆನ್ನಾಗಿ ಮಾಡು ಅಂತಾನೇ ಹೇಳಿದ್ದರು. ದರ್ಶನ್ ಮತ್ತು ಸುದೀಪ್ ಮನಸ್ಸಿನ ಒಳಗಿರುವ ಭಾವನೆ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.













