ನ್ಯೂಸ್ ನಾಟೌಟ್: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS), ಕರ್ನಾಟಕದ ಸಹಯೋಗದಲ್ಲಿ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಕುರುಂಜಿಬಾಗ್, ಸುಳ್ಯ ವತಿಯಿಂದ ಆರ್‌ಜಿಯುಎಚ್‌ಎಸ್ ಅಂತರ್ ವಲಯ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ,ಸಿಂಗಲ್ ಝೋನ್ ಮಹಿಳಾ ಹಗ್ಗಜಗ್ಗಾಟ ಟೂರ್ನಮೆಂಟ್ ಹಾಗೂ ಆರ್‌ಜಿಯುಎಚ್‌ಎಸ್ ಸೆಲೆಕ್ಷನ್ ಟ್ರಯಲ್ ಡಿಸೆಂಬರ್ 23 ಮತ್ತು 24ರಂದು ಕೆವಿಜಿ ಕ್ಯಾಂಪಸ್‌ನ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಸ್ಪರ್ಧೆಗಳ ಉದ್ಘಾಟನಾ ಸಮಾರಂಭವು ಡಿಸೆಂಬರ್ 23ರಂದು ಗಣ್ಯರು ದೀಪ ಬೆಳಗುವುದರೊಂದಿಗೆ ಪ್ರಾರಂಭಗೊಂಡಿತು.ಸಮಾರಂಭದ ಅಧ್ಯಕ್ಷತೆಯನ್ನು ಎಒಎಲ್ ಇ® ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಅರ್ಕಿಟೆಕ್ಟ್ ಅಕ್ಷಯ್ ಕೆ. ಸಿ ವಹಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆರ್‌ಜಿಯುಎಚ್‌ಎಸ್ ಸೆನೆಟ್ ಸದಸ್ಯೆ, ಡಾ. ಎಂ.ವಿ. ಶೆಟ್ಟಿ ಫಿಸಿಯೋಥೆರಪಿ ಕಾಲೇಜು, ಮಂಗಳೂರು ಇಲ್ಲಿನ ಉಪಪ್ರಾಂಶುಪಾಲೆ ಹಾಗೂ ಪ್ರಾಧ್ಯಾಪಕಿಯಾದ ಡಾ. ವೈಶಾಲಿ ಶ್ರೀಜಿತ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್ ಹಾಗೂ ಕ್ರೀಡಾ ಸಂಯೋಜಕರಾದ ಡಾ. ದಾಮೋದರ್ ಡಿ. ಹಾಗೂ
ಗೌರವಾನ್ವಿತ ಅತಿಥಿಗಳಾಗಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ ನೀಲಾಂಬಿಕೈ ನಟರಾಜನ್, ಫಿಸಿಯಾಜಿ ವಿಭಾಗದ ಪ್ರೊಫೆಸರ್ ಹಾಗೂ ಕ್ರೀಡಾ ಸಂಯೋಜಕರಾದ ಡಾ ದಾಮೋದರ್ ಡಿ, ಸಹ ಸಂಸ್ಥೆಗಳ ಪ್ರಾಂಶುಪಾಲರುಗಳಾದ ಡಾ ಪ್ರಮೋದ್ ಕೆ. ಜೆ, ಚಂದ್ರಾವತಿ, ಡಾ ಸಚಿನ್ ರಿಜಿಸ್ಟ್ರಾರ್ ಡಾ ಸಂದೇಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಕ್ರೀಡಾಂಗಣಕ್ಕೆ ತೆರಳಿ ಶುಭ ಹಾರೈಸುವುದರೊಂದಿಗೆ ಸ್ಪರ್ಧೆಗೆ ಚಾಲನೆ ನೀಡಿದರು.
ಬಳಿಕ ಹಗ್ಗಜಗ್ಗಾಟ ಸ್ಪರ್ಧೆ ಪ್ರಾರಂಭಗೊಂಡಿತು. ಮಂಗಳೂರು ವಲಯದ ವಿವಿಧ ವೈದ್ಯಕೀಯ ಮಹಾವಿದ್ಯಾಲಯಗಳಿಂದ ಆಗಮಿಸಿದ ಅನೇಕ ತಂಡಗಳು ಭಾಗವಹಿಸಲಿವೆ. ವೈದ್ಯಕೀಯ ಶಿಕ್ಷಣ ನಿರ್ದೇಶಕರುಗಳಾದ ಮಿಥನ್, ನಾಗರಾಜ್ ನಾಯಕ್, ಲೆಫ್ಟಿನೆಂಟ್ ಸೀತಾರಾಮ್ ಎಮ್ ಉಪಸ್ಥಿತರಿದ್ದು ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಸಹ ಸಂಸ್ಥೆಗಳ ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಪ್ರಧ್ಯಾಪಕರು, ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.













