ನ್ಯೂಸ್ ನಾಟೌಟ್ : ಕನ್ನಡ ಚಿತ್ರರಂಗಕ್ಕೆ ಬಂದು 15 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಗಿಣಿ ತಮ್ಮ ಪಯಣದ ಕುರಿತು ಭಾವುಕರಾಗಿ ಮಾತನಾಡಿದ್ದಾರೆ.
ಪಂಜಾಬಿ ಮೂಲ ನನ್ನದು. ಮಾಡೆಲಿಂಗ್ ಮಾಡಿಕೊಂಡಿದ್ದೆ. ಕನ್ನಡ ಚಿತ್ರರಂಗ ಇದೆ ಎನ್ನುವುದೇ ನನಗೆ ಗೊತ್ತಿರಲಿಲ್ಲ. ಆಗ ಸಿಕ್ಕಿದ್ದೇ ‘ಹೋಳಿ’ ಚಿತ್ರ. ಇದು ನಾನು ನಟಿಸಿದ ಮೊದಲ ಚಿತ್ರ. ಆದರೆ, ಮೊದಲು ಬಿಡುಗಡೆ ಆಗಿದ್ದು ‘ವೀರ ಮದಕರಿ’. ಹೀಗಾಗಿ ನನಗೆ ಈ ಸಿನಿಮಾ ವಿಶೇಷ. ಈಗ ಮೋಹನ್ ಲಾಲ್ ಜೊತೆಗೆ ಕಾಣಿಸಿಕೊಂಡಿರುವ ‘ವೃಷಭ’ ಚಿತ್ರದವರೆಗೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ ಎಂದಿದ್ದಾರೆ.
ವೀರ ಮದಕರಿ’ ಚಿತ್ರದ ಶೂಟಿಂಗ್ ಸಮಯದಲ್ಲಿ ಕಿಚ್ಚ ಸುದೀಪ್ ಅವರಿಂದ ಸಾಕಷ್ಟು ಕಲಿತೆ. ಈ ಕಲಿಕೆ ಚಿತ್ರರಂಗದ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಯಿತು. ಆ ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಪರಭಾಷೆಗೂ ಹೋಗಿ ನಟಿಸಿದ್ದೇನೆ. ಎಲ್ಲೇ ಹೋಗಿ ನಟಿಸಿದರೂ ಕನ್ನಡವೇ ನನ್ನ ಮನೆ.
ಪಾತ್ರಗಳ ಆಯ್ಕೆಯಲ್ಲಿ ಚೂಸಿಯಾಗಿದ್ದೇನೆ. ದರ್ಶನ್ ಅವರ ‘ದಿ ಡೆವಿಲ್’ ಚಿತ್ರದಲ್ಲಿ ಒಂದು ಪಾತ್ರದಲ್ಲಿ ನಾನು ನಟಿಸಬೇಕಿತ್ತು. ಆದರೆ, ಆ ಪಾತ್ರ ಇಷ್ಟವಾಗಲಿಲ್ಲ. ಹೀಗಾಗಿ ನಟಿಸುವುದಿಲ್ಲ ಎಂದು ಹೇಳಿದೆ.













