ಅರಂತೋಡು: ಕಾಡಿನಿಂದ ಆಹಾರ ಅರಸುತ್ತಾ ನಾಡಿಗೆ ಬಂದ ಹೆಬ್ಬಾವನ್ನು ಸೆರೆಹಿಡಿಯಲಾಗಿದೆ. ಸುಳ್ಯ ಸಮೀಪದ ಗೂನಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಹದಿನೈದು ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ಜನರನ್ನ ಆತಂಕಕ್ಕೀಡು ಮಾಡಿತ್ತು. ಕೂಡಲೇ ಸ್ಥಳೀಯರು ಸಂಬಂಧ ಪಟ್ಟವರಿಗೆ ಮಾಹಿತಿ ನೀಡಿದರು.
ಅರಣ್ಯಾಧಿಕಾರಿ ಚಂದ್ರು ಸೇರಿದಂತೆ ಉರಗ ಪ್ರೇಮಿ ಶರತ್ ಕೀಲಾರ್ ಸಂಪಾಜೆ ಸ್ಥಳಕ್ಕೆ ಧಾವಿಸಿ ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿಯಲು ಹರಸಾಹಸ ಪಟ್ಟರು. ಕೊನೆಗೂ ಈ ಹೆಬ್ಬಾವು ಬಂಧಿಯಾಗಿದ್ದು, ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ಹೆಬ್ಬಾವು ಸೆರೆ ಹಿಡಿದ ರೋಚಕ ದೃಶ್ಯಗಳು ಇಲ್ಲಿವೆ ನೋಡಿ…