21.6 C
Sullia
Sunday, March 8, 2026

ʻಗೃಹಲಕ್ಷ್ಮಿʼ ಜಟಾಪಟಿಗೆ ತಾತ್ಕಾಲಿಕ ತೆರೆ: ಹೊಸವರ್ಷಕ್ಕೂ ಮುನ್ನವೇ ʻಗೃಹಲಕ್ಷ್ಮಿʼಯರ ಖಾತೆಗೆ ಹಣ

ನ್ಯೂಸ್ ನಾಟೌಟ್ : ರಾಜ್ಯದಲ್ಲಿ ನಡೆಯುತ್ತಿದ್ದ ʻಗೃಹಲಕ್ಷ್ಮಿʼ ಜಟಾಪಟಿಗೆ ತಾತ್ಕಾಲಿಕ ತೆರೆ ಬಿದ್ದಂತೆ ಕಾಣ್ತಿದೆ.ಸರ್ಕಾರ ಕೊನೆಗೂ ಒಂದು ಕಂತಿನ ಹಣ ಬಿಡುಗಡೆ ಮಾಡಿದೆ. ಹೊಸವರ್ಷಕ್ಕೂ ಮುನ್ನವೇ ಈ ಹಣ ಮನೆ ಯಜಮಾನಿಯರ ಕೈ ಸೇರಲಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಪ್ರತಿ ತಿಂಗಳು ಮನೆಯ ಯಜಮಾನಿಯರ ಆಕೌಂಟ್‌ಗೆ ಠಣ್ ಅಂತಾ ಎರಡು ಸಾವಿರ ಬೀಳ್ತಾ ಇರುತ್ತೆ. ಹೀಗೆ ಕಾಂಗ್ರೆಸ್ ಸರ್ಕಾರ ಹೇಳಿಕೊಂಡಿತ್ತು. ಆದ್ರೆ 2-3 ತಿಂಗಳಿಗೊಮ್ಮೆ ಮಾತ್ರ ಗೃಹಲಕ್ಷ್ಮಿ ದುಡ್ಡು ಆಕೌಂಟ್ ಬೀಳ್ತಾ ಇತ್ತು. ಫೆಬ್ರವರಿ ಮಾರ್ಚ್ ದುಡ್ಡು ಎಲ್ಲಿ ಹೋಯ್ತು ಗೊತ್ತಿಲ್ಲ. ಕೊನೆಗೂ ಸೆಪ್ಟೆಂಬರ್‌ ಕಂತಿನ ಹಣವನ್ನ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್‌ 16ರಂದೇ ಆರ್ಥಿಕ ಇಲಾಖೆಯಿಂದ ಸೆಪ್ಟೆಂಬರ್‌ ಕಂತಿನ ಹಣ ಬಿಡುಗಡೆ ಆಗಿದ್ದು, ಹೊಸ ವರ್ಷಕ್ಕೂ ಮುನ್ನವೇ ಗೃಹಲಕ್ಷ್ಮಿಯರ ಖಾತೆಗೆ ಹಣ ಜಮೆಯಾಗುವ ಸಾಧ್ಯತೆಯಿದೆ.

ಇನ್ನೂ ಅಕ್ಟೋಬರ್, ನವೆಂಬರ್, ಡಿಸೆಂಬರ್ ದುಡ್ಡು ಅದ್ಯಾವಾಗ ರಿಲೀಸ್ ಆಗುತ್ತೋ ಗೊತ್ತಿಲ್ಲ. ಆದ್ರೇ ಇನ್ನೊಂದು ವಾರದಲ್ಲಿ ಸೆಪ್ಟೆಂಬರ್ ಕಂತಿನ ಹಣ ಡಿಬಿಟಿ ಮೂಲಕ ಪ್ರತಿ ಮನೆ ಯಜಮಾನಿ ಖಾತೆಗೆ ಜಮೆಯಾಗಲಿದೆ ಎಂದು ಮೂಲಗಳು ತಿಳಿಸಿವೆ

Related Articles

LEAVE A REPLY

Please enter your comment!
Please enter your name here

Latest Articles