ನ್ಯೂಸ್ ನಾಟೌಟ್ : ಶ್ರೀ ಮಂತ್ರವಾದಿ ಗುಳಿಗ, ಮರ್ಲ್ ಮಯ್ಯೋಂತಿ, ಸ್ವಾಮಿ ಕೊರಗಜ್ಜ ಕ್ಷೇತ್ರ ಅಂಕತ್ತಡ್ಕದಲ್ಲಿ 5ನೇ ವರ್ಷದ ಕೋಲೋತ್ಸವ 2026ರ ಫೆ.7 ಮತ್ತು 8ರಂದು ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಲಿದೆ. ಈ ಪ್ರಯುಕ್ತ ಇಂದು ಕ್ಷೇತ್ರದಲ್ಲಿ ಕೋಲೋತ್ಸವದ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು.



ಈ ಸಂದರ್ಭ ಸುಬ್ಬಯ್ಯ ರೈ ಶೇಡಿ ಮನೆ, ಕಿಟ್ಟಣ್ಣ ರೈ ಪೂಂಜಿರೋಟ್, ಉದಯ ಬಾಳಗೋಡು, ವೆಂಕಟ್ ಕಣಿಯಾರ್, ರೋಹಿತ್, ಮನು, ಪೊಡಿಯ ಅಂಕತ್ತಡ್ಕ, ನಿತ್ಯ ದೀಪಾರಾಧಕರು ಕೃಷ್ಣ ಅಂಕತ್ತಡ್ಕ, ವೆಂಕಟೇಶ್ ಕಾಪುತಡ್ಕ ಉಪಸ್ಥಿತರಿದ್ದರು.













