27.7 C
Sullia
Sunday, March 8, 2026

ಧ್ರುವ ಸರ್ಜಾ ಸಿನಿಮಾದಿಂದ ಹೊರಬಿದ್ದರೇ ರಚಿತಾ ರಾಮ್? ಕಾರಣವೇನು?

ನ್ಯೂಸ್ ನಾಟೌಟ್ : ಧ್ರುವ ಸರ್ಜಾ ಸಿನಿಮಾ ‘ಕ್ರಿಮಿನಲ್’ ಇತ್ತೀಚೆಗೆ ಈ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿದೆ.

Ad Widget
Ad Widget
Ad Widget
Ad Widget
Ad Widget
Ad Widget
Ad Widget

ಈ ಸಿನಿಮಾವನ್ನು ಬಾಲಿವುಡ್‌ನ ಗೋಲ್ಡ್‌ಮೈನ್ಸ್ ಟೆಲಿಫಿಲ್ಮ್ಸ್‌ನ ಮನೀಶ್ ಶಾ ನಿರ್ಮಾಪಕರಾಗಿ ಬಂದಿದ್ದಾರೆ. ಹೀಗಾಗಿ ಸ್ಯಾಂಡಲ್‌ವುಡ್ ಮಂದಿಯ ಕಣ್ಣು ಇವರ ಮೇಲಿದೆ. ಧ್ರುವ ಸರ್ಜಾ ಜೊತೆಗೆ ಸ್ಯಾಂಡಲ್‌ವುಡ್‌ನ ಡಿಂಪಲ್‌ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದು ಕುತೂಹಲವನ್ನು ದುಪ್ಪಟ್ಟು ಮಾಡಿತ್ತು. ಬರೋಬ್ಬರಿ ಎಂಟು ವರ್ಷಗಳ ಬಳಿಕ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರೋದಕ್ಕೆ ಧ್ರುವ ಫ್ಯಾನ್ಸ್ ಕೂಡ ಖುಷಿ ಪಟ್ಟಿದ್ದರು.

ಆದ್ರೀಗ ಗಾಂಧಿನಗರದಲ್ಲಿ ಇದ್ದಕ್ಕಿದ್ದ ಹಾಗೇ ಧ್ರುವ ಸರ್ಜಾ ಸಿನಿಮಾದಿಂದ ಡಿಂಪಲ್ ಕ್ವೀನ್ ರಚಿತಾ ರಾಮ್ ಹೊರ ನಡೆದಿದ್ದಾರೆಂಬ ಸುದ್ದಿ ಹೊರಬಿದ್ದಿದೆ. ಅಷ್ಟಕ್ಕೂ ಕಾರಣವೇನು ಅಂತ ಹುಡುಕುತ್ತಾ ಹೊರಟರೇ, ರಚಿತಾ ರಾಮ್‌ ಸಂಭಾವನೆ ವಿಷಯ ಅನ್ನೋ ಮಾತು ಕೇಳಿ ಬರುತ್ತಿದೆ. ಡಿಂಪಲ್‌ ಕ್ವೀನ್‌ಗೆ ಮೊದಲೇ ಮಾತಾಡಿದಂತೆ ಸಂಭಾವನೆಯನ್ನು ಮುಂಗಡವಾಗಿ ನಿರ್ಮಾಪಕರು ಕೊಟ್ಟಿಲ್ಲ. 15 ದಿನ ತಡವಾಗಿ ನೀಡುವುದಾಗಿ, ಶೂಟಿಂಗ್‌ನಲ್ಲಿ ಭಾಗವಹಿಸಿ ಎಂದು ಹೇಳಿದ್ದರಂತೆ. ಇದಕ್ಕೆ ರಚಿತಾ ರಾಮ್ ಒಪ್ಪಲಿಲ್ಲ. ಕ್ರಿಮಿನಲ್ ಸಿನಿಮಾದಿಂದ ಹೊರ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನೊಂದು ಕಡೆ ‘ಕ್ರಿಮಿನಲ್’ ಸಿನಿಮಾದ ಮೇಲ್ವಿಚಾರಣೆಯನ್ನು ಧ್ರುವ ಸರ್ಜಾ ಅವರೇ ನೋಡಿ ಕೊಳ್ಳುತ್ತಿದ್ದಾರೆ ಅನ್ನೋ ಮಾತು ಕೂಡ ಇದೆ. ಧ್ರುವ ಸರ್ಜಾ ತನ್ನದೇ ಜವಾಬ್ದಾರಿ ಎಂದು ಹೇಳಿದ್ದರೂ ರಚಿತಾ ರಾಮ್ ಒಪ್ಪಲಿಲ್ಲ ಅನ್ನೋ ಮಾತು ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ಧ್ರುವ ಸರ್ಜಾ ಆಗಲಿ, ರಚಿತಾ ರಾಮ್ ಆಗಲಿ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಓಪನ್ ಆಗಿ ಎಲ್ಲೂ ಮಾತಾಡಿಲ್ಲ. ಆದರೆ, ಗಾಂಧಿನಗರದಲ್ಲಿ ಮಾತ್ರ ಸಿನಿಮಾ ಮಂದಿ ‘ಕ್ರಿಮಿನಲ್’ ಸಿನಿಮಾದಲ್ಲಿ ರಚಿತಾ ರಾಮ್ ನಟಿಸುತ್ತಿಲ್ಲ ಎಂದು ಖಡಾ ಖಂಡಿತವಾಗಿ ಹೇಳುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles