21.6 C
Sullia
Sunday, March 8, 2026

‘ಕಿಚ್ಚನ ಚಪ್ಪಾಳೆ’ ಗಿಲ್ಲಿಗೆ ಸಿಗಬೇಕೆಂದು ಫ್ಯಾನ್ಸ್‌ ಬೇಡಿಕೆ,ಯಾಕೆ ಸಿಗಬೇಕೆಂದು ಕಾರಣವನ್ನೂ ನೀಡಿದ‌ ಅಭಿಮಾನಿಗಳು

ನ್ಯೂಸ್ ನಾಟೌಟ್ : ಬಿಗ್‌ ಬಾಸ್‌ ಕನ್ನಡ 12 ’ ಆರಂಭವಾದ ಕ್ಷಣದಿಂದಲೇ ಗಿಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಬಿಗ್‌ ಬಾಸ್‌ ನೋಡೋದಕ್ಕೆ ಸೆಪರೇಟ್‌ ಆಡಿಯನ್ಸ್‌ ಇದ್ದರೆ, ಗಿಲ್ಲಿಯನ್ನ ನೋಡಲೆಂದೇ ಅಭಿಮಾನಿಗಳು ಕಾದು ಕುಳಿತಿರ್ತಾರೆ. ಆ ಮಟ್ಟಕ್ಕೆ ಗಿಲ್ಲಿ ಕ್ರೇಜ್‌ ಹೆಚ್ಚಾಗಿದೆ. ಅದರಲ್ಲೂ ಗಿಲ್ಲಿ ಪಂಚಿಂಗ್‌ ಡೈಲಾಗ್ಸ್‌, ಕಾಮಿಡಿಯನ್ನ ನೋಡಿ ಎಂಜಾಯ್‌ ಮಾಡದವರೇ ಇಲ್ಲ. ಚಿಕ್ಕ ಮಕ್ಕಳ ಬಾಯಲ್ಲೂ ಸದ್ಯ ಗಿಲ್ಲಿಯದ್ದೇ ಹೆಸರು. ಇಂತಿಪ್ಪ ಗಿಲ್ಲಿ ಈ ವಾರ ಟಾಸ್ಕ್‌ಗಳಲ್ಲಿ ಉತ್ತಮ ಪರ್ಫಾಮೆನ್ಸ್‌ ನೀಡಿದ್ದಾರೆ. ಹೀಗಾಗಿ ಈ ವಾರದ ಕಿಚ್ಚನ ಚಪ್ಪಾಳೆ ಗಿಲ್ಲಿಗೆ ಸಿಗಬೇಕು ಅನ್ನೋದು ವೀಕ್ಷಕರ ಅಭಿಪ್ರಾಯ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಈ ವಾರ ಗಿಲ್ಲಿಯಲ್ಲಿ ತುಂಬಾ ಬದಲಾವಣೆಗಳಿದ್ದವು. ಕಾವ್ಯ ತಮ್ಮನ್ನ ಇರಿಟೇಟ್‌ ಮಾಡ್ತಿದ್ದೀರ ಎಂದು ಗಿಲ್ಲಿಯನ್ನ ನಾಮಿನೇಟ್‌ ಮಾಡಿದ ಕ್ಷಣದಿಂದಲೇ ಗಿಲ್ಲಿ ಮತ್ತೆ ಕಾವ್ಯನ ಇರಿಟೇಟ್‌ ಮಾಡಲಿಲ್ಲ. ಇನ್ನೂ ತನ್ನ ಕಾಮಿಡಿಯಿಂದ ಕೆಲವರಿಗೆ ಹರ್ಟ್‌ ಆಗ್ತಿದೆ ಅನ್ನೋದು ಗೊತ್ತಾಗಿ, ಯಾರಿಗೂ ಹರ್ಟ್‌ ಆಗದೇ ಇರೋ ರೀತಿ ಗಿಲ್ಲಿ ಕಾಮಿಡಿ ಮಾಡಿದ್ದರು. ಈ ವಾರ ಗಿಲ್ಲಿಯಲ್ಲಿ ತುಂಬಾ ಬದಲಾವಣೆಗಳಿವೆ. ಹೀಗಾಗಿ ಗಿಲ್ಲಿಗೆ ಕಿಚ್ಚನ ಚಪ್ಪಾಳೆ ಸಿಗಬೇಕು ಅಂತಿದ್ದಾರೆ ಫ್ಯಾನ್ಸ್.‌

ಅಷ್ಟೇ ಅಲ್ಲ, ಒಲ್ಲದ ಮನಸ್ಸಿನಿಂದ ಕಾವ್ಯರನ್ನ ಹರ್ಟ್‌ ಮಾಡಿ, ತಾವು ಕೂಡ ಊಟ ಬಿಟ್ಟಿದ್ದರು ಗಿಲ್ಲಿ. ಈ ವಾರ ಎಲ್ಲರ ಜೊತೆಗೂ ಗಿಲ್ಲಿ ಮಾತನಾಡಿಕೊಂಡು ಆರಾಮಾಗಿದ್ದರು. ಅಡುಗೆ ಮಾಡೋಕೆ ಬಾರದೇ ಇದ್ದರೂ, ಮನೆಯವರಿಗೋಸ್ಕರ ಅಶ್ವಿನಿ ಗೌಡಗೆ ಸಾಥ್‌ ನೀಡಿದ್ದರು. ಹೀಗೆ ಹಲವು ಕಾರಣಗಳನ್ನ ಮುಂದಿಟ್ಟು ಈ ವಾರ ಕಿಚ್ಚನ ಚಪ್ಪಾಳೆ ಸಿಗಲೇಬೇಕು ಅಂತಿದ್ದಾರೆ ಅಭಿಮಾನಿಗಳು. ಆದರೆ, ಗಿಲ್ಲಿಗೆ ಮತ್ತೊಮ್ಮೆ ಕಿಚ್ಚನ ಚಪ್ಪಾಳೆ ಸಿಗುತ್ತಾ? ಕಾದು ನೋಡಬೇಕು..

Related Articles

LEAVE A REPLY

Please enter your comment!
Please enter your name here

Latest Articles