37.4 C
Sullia
Sunday, March 8, 2026

ಕೊಡಗು: ಹೆದ್ದಾರಿಯಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ,ಬೆಚ್ಚಿಬಿದ್ದ ವಾಹನ ಸವಾರರು!

ನ್ಯೂಸ್ ನಾಟೌಟ್ :ಕೊಡಗು ಜಿಲ್ಲೆಯ ಹಲವೆಡೆಗಳಲ್ಲಿ ಕಾಡಾನೆ ಹಾಗೂ ಮಾನವನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಿನ ಬೆಳಗಾದ್ರೆ ಅರಣ್ಯ ಪ್ರದೇಶಗಳಲ್ಲಿರುವ ಕಾಡಾನೆ ಹಿಂಡು ಕಾಫಿ ತೋಟಗಳಿಗೆ ಲಗ್ಗೆ ಇಟ್ಟು ಸಾಕಷ್ಟು ಬೆಳೆ ನಾಶ ಮಾಡುತ್ತಿವೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಈ‌ ನಡುವೆ ಇಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆಯ ಹಾಗೂ ಘಟ್ಟದಳ ಗ್ರಾಮದ ಕಾಫಿ ತೋಟದಿಂದ ಸುಮಾರು ಹತ್ತಕ್ಕೂ ಅಧಿಕ ಕಾಡಾನೆಗಳ ಹಿಂಡು ಹೆದ್ದಾರಿಯಲ್ಲಿ ಪ್ರತ್ಯಕ್ಷವಾಗಿದೆ. ಮಾಲ್ದಾರೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಂಚಾರ ಮಾಡಿದೆ. 

ಪಿರಿಯಾಪಟ್ಟಣ – ಸಿದ್ದಾಪುರದ ಮುಖ್ಯ ರಾಜ್ಯದಲ್ಲಿ ಹೆದ್ದಾರಿ ಆಗಿರುವುದರಿಂದ ಸಾಕಷ್ಟು ವಾಹನ ಸವಾರರು ಇದೇ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದಾರೆ. ಈ ನಡುವೆ ತೋಟದಿಂದ ಬಂದ ಕಾಡಾನೆಗಳು ಕೆಲ ನಿಮಿಷಗಳ ಕಾಲ ಮುಖ್ಯ ರಸ್ತೆಯಲ್ಲೇ ಓಡಾಟ ನಡೆಸಿವೆ.

ಹೀಗಾಗಿ ವಾಹನ ಸವಾರರು ಹಾಗೂ ಕೂಲಿ ಕಾರ್ಮಿಕರು ಕಾಡಾನೆ ಹಿಂಡನ್ನ ನೋಡಿ ಆತಂಕಕ್ಕೆ ಒಳಗಾಗಿದ್ರು. ಈ‌ ನಡುವೆ ಮೀಸಲು ಅರಣ್ಯ ಪ್ರದೇಶದಲ್ಲಿ ಇದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಗಳನ್ನ ಕಾಡಿಗೆ ಅಟ್ಟಿದ್ರು. ಇದರಿಂದಾಗಿ ರಸ್ತೆಯಲ್ಲಿ ಇದ್ದ ವಾಹನ ಸವಾರರು ನಿಟ್ಟುಸಿರು ಬಿಡುವಂತೆ ಆಯ್ತು. 

Related Articles

LEAVE A REPLY

Please enter your comment!
Please enter your name here

Latest Articles