37.3 C
Sullia
Sunday, March 8, 2026

ಅಪರೂಪದ 2 ಲಕ್ಷದ ಗಿಳಿ ರಕ್ಷಿಸಲು ಹೋದ ಯುವಕ: ವಿದ್ಯುತ್ ಶಾಕ್ ಹೊಡೆದು ಮೃತ್ಯು

ನ್ಯೂಸ್ ನಾಟೌಟ್ : ವಿದೇಶಿ ತಳಿಯ ಎರಡು ಲಕ್ಷ ರೂ. ಬೆಲೆ ಬಾಳುವ ಗಿಳಿ ರಕ್ಷಿಸಲು ಹೋಗಿ, ಕರೆಂಟ್‌ ಶಾಕ್‌ ಹೊಡೆದು ವ್ಯಕ್ತಿಯೊಬ್ಬರು ತಮ್ಮ ಪ್ರಾಣವನ್ನೇ ಕಳೆದುಕೊಂಡ ಘಟನೆ ಗಿರಿನಗರದಲ್ಲಿ ಶುಕ್ರವಾರ


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಅರುಣ್ ಕುಮಾರ್ (33) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಲೋಗೋ ಎಂಬಾಸಿಂಗ್ ಉದ್ಯಮ ನಡೆಸುತ್ತಿದ್ದರು ಎನ್ನಲಾಗಿದೆ. ಮಂಡ್ಯದ ನಾಗಮಂಗಲದವರಾದ ಇವರು, ವೀರಭದ್ರನಗರದಲ್ಲಿ ವಾಸವಾಗಿದ್ದರು. ಗಿರಿನಗರದ ವಸುಂಧರಾ ಕೃತಿಕಾ ಅಪಾರ್ಟ್‌ಮೆಂಟ್‌ನಲ್ಲಿ ತಂಗಿರುವ ಅವರ ಚಿಕ್ಕಮ್ಮನ ಮನೆಗೆ ಆಗಾಗ ಬರುತ್ತಿದ್ದರು. ಇಂದು(ಡಿ.12)ರಂದು ಬಂದಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಶುಕ್ರವಾರ ಬೆಳಿಗ್ಗೆ ಸುಮಾರು 9.45 ರ ಸುಮಾರಿಗೆ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಗಿಳಿಯೊಂದು ಮನೆಯಿಂದ ಹಾರಿಹೋಗಿ ಅಪಾರ್ಟ್‌ಮೆಂಟ್ ಆವರಣದಲ್ಲಿರುವ ಹೈಟೆನ್ಷನ್ ವಿದ್ಯುತ್ ಕಂಬದ ಮೇಲೆ ಕುಳಿತಿತ್ತು. ಇದನ್ನು ರಕ್ಷಿಸಲು ಅರುಣ್ ಕುಮಾರ್ ಮುಂದಾದರು. ಅವರು ಕಾಂಪೌಂಡ್ ಗೋಡೆ ಏರಿ, ಕಬ್ಬಿಣದ ಪೈಪ್‌ಗೆ ಕೋಲೊಂದನ್ನು ಕಟ್ಟಿಕೊಂಡು ಗಿಳಿಯನ್ನು ಹಿಡಿಯಲು ಪ್ರಯತ್ನಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ವಿದ್ಯುತ್‌ ತಗಲಿದ್ದು ಹೇಗೆ?

ಆಕಸ್ಮಿಕವಾಗಿ 66,000 ಕೆವಿಸಾಮರ್ಥ್ಯದ ಲೈವ್ ವೈರ್‌ಗೆ ಅರುಣ್ ಸ್ಪರ್ಶಿಸಿದ್ದಾರೆ. ವಿದ್ಯುತ್ ಶಾಕ್ ಹೊಡೆದ ರಭಸಕ್ಕೆ ಅವರು ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನುಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಮಾರ್ಗಮಧ್ಯೆಯೇ ಅರುಣ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles