21.6 C
Sullia
Sunday, March 8, 2026

ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರು, ಸಿಇಒ, ತೋಟಗಾರಿಕೆ, ಇನ್ಸೂರೆನ್ಸ್ ಕಂಪೆನಿ ಅಧಿಕಾರಿಗಳ ಜತೆ ಡಿ.12ರಂದು ಸಭೆ

ನ್ಯೂಸ್ ನಾಟೌಟ್ :. ಡಿ.12ರಂದು ಅಪರಾಹ್ನ 3 ಗಂಟೆಗೆ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಸಿಇಒಗಳು, ತೋಟಗಾರಿಕಾ ಇಲಾಖೆ ಹಾಗೂ ಇನ್ಸೂರೆನ್ಸ್‌ ಕಂಪೆನಿಯ ಅಧಿಕಾರಿಗಳ ಜತೆ ಸಭೆ ಕರೆಯಲಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಪುತ್ತೂರು ತಾಲೂಕಿನಲ್ಲಿ ವಿಪರೀತ ಮಳೆ ಬಂದಿದ್ದು,ಕುಂಬ್ರ ಹಾಗೂ ಉಪ್ಪಿನಂಗಡಿಯಲ್ಲಿ ಮಳೆಮಾಪಕಗಳು ಇದೆ.ಆದರೆ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ರೈತರು ತಿಳಿಸಿದ್ದಾರೆ.ಈ ಹಿನ್ನಲೆಯಲ್ಲಿಎಲ್ಲಾ ರೈತರನ್ನು ಈಗಾಗಲೇ ಸಂಪರ್ಕಿಸುವ ಕೆಲಸ ಮಾಡಿದ್ದೇವೆ ಎಂದು ಶಶಿಕುಮಾರ್ ರೈ , ಬಾಲ್ಯೂಟ್ಟು ನಿರ್ದೇಶಕರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮಂಗಳೂರು ತಿಳಿಸಿದ್ದಾರೆ.

ಪುತ್ತೂರು ತಾಲೂಕಿನಲ್ಲಿ ಹಿರಿಯ ರೈತರೋರ್ವರು 43 ಸಾವಿರ ರೂ.ವಿಮಾ ಪ್ರೀಮಿಯಂ ಕಟ್ಟಿದ್ದು ಅವರಿಗೆ ಅತ್ಯಲ್ಪ ಮೊತ್ತದ ವಿಮಾ ಮೊತ್ತ ಪಾವತಿಯಾಗಿರುವುದು ತಿಳಿದಿದೆ.

ರೂ.10 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಯಾವ ರೈತರಿಗೂ ಬಂದಿಲ್ಲ.ಬೆಳೆ ಹಾನಿಯಿಂದಾಗಿ ರಸಗೊಬ್ಬರ ಹಾಕಲು ಬೆಳೆವಿಮೆಯನ್ನು ನಂಬುವ ಸ್ಥಿತಿ ಬಂದಿದೆ.ಈ ಬಾರಿ ವಿಮಾ ಕಂಪೆನಿ ಬೇಜವಾಬ್ದಾರಿ ವರ್ತನೆ ಮಾಡಿದೆ.ಇದರ ಬಗ್ಗೆ ಎಸ್ ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ|ರಾಜೇಂದ್ರ ಕುಮಾರ್‌ರವರಿಗೆ ತಿಳಿಸಿದ್ದೇವೆ ಎಂದವರು ಹೇಳಿದ್ದಾರೆ.

ಡಿ.12ರಂದು ಅಪರಾಹ್ನ 3 ಗಂಟೆಗೆ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಸಿಇಒಗಳು, ತೋಟಗಾರಿಕಾ ಇಲಾಖೆ ಹಾಗೂ ಇನ್ಸೂರೆನ್ಸ್‌ ಕಂಪೆನಿಯ ಅಧಿಕಾರಿಗಳ ಜತೆ ಸಭೆ ಕರೆದಿದ್ದು,ಸಹಕಾರ ಸಂಘಗಳ ಅಧ್ಯಕ್ಷರು, ಸಿಇಒಗಳು ಭಾಗವಹಿಸಬೇಕು.ಸಭೆಯಲ್ಲಿ ರೈತರ ಪರವಾಗಿ ಚರ್ಚೆ ಮಾಡಿ, ಮುಂದಿನ ಹಂತವಾಗಿ ಕೋರ್ಟಿಗೆ ಹೋಗುವ ಬಗ್ಗೆ ಅಥವಾ ಸರಕಾರಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ನಿರ್ಧಾರ ಮಾಡಲಿದ್ದೇವೆ ಎಂದು ಶಶಿಕುಮಾರ್ ರೈ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles