27.7 C
Sullia
Sunday, March 8, 2026

ಸುಳ್ಯ: ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕ ಅಧ್ಯಕ್ಷರಾಗಿ ಮಂಜುನಾಥ್ ಕಂದಡ್ಕ ನೇಮಕ

ನ್ಯೂಸ್ ನಾಟೌಟ್: ಸುಳ್ಯ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕ ಅಧ್ಯಕ್ಷರಾಗಿ ಮಂಜುನಾಥ್ ಕಂದಡ್ಕ ನೇಮಕಗೊಂಡಿದ್ದಾರೆ. ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಜಿಲ್ಲಾ ಅಸಂಘಟಿತ ಘಟಕದ ಅಧ್ಯಕ್ಷ ಅಬ್ಬಾಸ್ ಅಲಿ ನೇತೃತ್ವದಲ್ಲಿ ನಡೆದ ಅಸಂಘಟಿತ ಕಾರ್ಮಿಕ ಘಟಕದ ಮಾಸಿಕ ಸಭೆಯಲ್ಲಿ ಈ ನೇಮಕವನ್ನು ಮಾಡಲಾಯಿತು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಸುಳ್ಯ ತಾಲೂಕು ಅಸಂಘಟಿತ ಅಧ್ಯಕ್ಷ ದಿ. ಎಎಸ್ ಚಂದ್ರಲಿಂಗಂ ಅವರ ತೆರವಾದ ಸ್ಥಾನಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್ ಅವರ ಶಿಪಾರಸ್ಸಿನ ಮೇರೆಗೆ ಮಂಜುನಾಥ ಕಂದಡ್ಕ ಅವರನ್ನು ನೇಮಕಗೊಳಿಸಿ ಆದೇಶ ಮಾಡಿರುತ್ತಾರೆ. ಈ ಸಭೆಗೆ ಜಿಲ್ಲಾ ಅಸಂಘಟಿತ ಪ್ರಧಾನ ಕಾರ್ಯದರ್ಶಿ ಜ್ಞಾನಶೀಲನ್ ಕಲ್ಲುಗುಂಡಿ, ಕೆಪಿಸಿಸಿ ಕಾರ್ಮಿಕ ವಿಭಾಗ ಜಂಟಿ ಕಾರ್ಯದರ್ಶಿ ಸುರೇಶ್ ಕುಮಾರ್, ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯರು ಹಾಗೂ ಕರ್ನಾಟಕ ಪ್ಲಾಂಟೇಶನ್ ಆಂಡ್ ಇಂಡಸ್ಟ್ರಿಯಲ್ ವರ್ಕರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಶಿವಕುಮಾರ್ ಕಂದಡ್ಕ, ತೋಟತೊಳಿಲಾಲರ್ ಸಂಘದ ಪ್ರಧಾನ ಕಾರ್ಯದರ್ಶಿ ಸರವಣನ್ ಆರ್ ಬೇಂಗಮಲೆ, ತೋಟ ತೊಳಿಲಾಲರ್ ಸಂಘದ ಉಪಾಧ್ಯಕ್ಷ ಅರುಣಾಚಲಂ ಕೂಟೇಲ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರು ತಾಲೂಕು ಆಸ್ಪತ್ರೆ ಸುಳ್ಯ ಚಂದ್ರನ್ ವಿ ಕೂಟೇಲ್, ಸುಳ್ಯ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ದೊಡ್ಡಡ್ಕ, ಸುಳ್ಯ ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಪ್ರೇಮ ಹರೀಶ್ವರನ್ ಸಭೆಯಲ್ಲಿ ಉಪಸ್ಥಿತದ್ದರು.

Related Articles

LEAVE A REPLY

Please enter your comment!
Please enter your name here

Latest Articles