27.7 C
Sullia
Sunday, March 8, 2026

ಉಬರಡ್ಕದಲ್ಲಿ ಮಾಸ್ ಸಂಸ್ಥೆಯ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ

ಗ್ರಾಮೀಣ ಭಾಗದ ಅಡಿಕೆ ಬೆಳೆಗಾರರಿಗೆ ನೆರವಾದ ಮಾಸ್ ಸಂಸ್ಥೆ: ಸೀತಾರಾಮ ರೈ ಸವಣೂರು


Ad Widget
Ad Widget
Ad Widget
Ad Widget
Ad Widget
Ad Widget
Ad Widget

ನ್ಯೂಸ್ ನಾಟೌಟ್ : ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಸಭಾಭವನದಲ್ಲಿ ಮಂಗಳವಾರ (ಡಿ. 9) ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ, ಮಾಸ್ ಲಿಮಿಟೆಡ್ ಇವರಿಂದ ಉಬರಡ್ಕ ಮಿತ್ತೂರು ಪ್ರಾ.ಕೃ.ಪ.ಸ. ಸಂಘದ ಸಹಯೋಗದಲ್ಲಿ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಇವರ ಸಹಕಾರದೊಂದಿಗೆ ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಲಾಯಿತು.

ಮಾಸ್ ಲಿಮಿಟೆಡ್, ಮಂಗಳೂರು ಇದರ ಅಧ್ಯಕ್ಷ ಸಹಕಾರ ರತ್ನ ಕೆ. ಸೀತಾರಾಮ ರೈ ಸವಣೂರು ಉದ್ಘಾಟಿಸಿ ಮಾತನಾಡಿ, ಉಬರಡ್ಕ ಮಿತ್ತೂರು ಭಾಗದ ಅಡಿಕೆ ಬೆಳೆಗಾರರಿಗೆ ಇದು ಉತ್ತಮ ಅವಕಾಶ. 8ರಿಂದ 10ಕಿ.ಮೀ. ಕ್ರಮಿಸಿ ಸುಳ್ಯಕ್ಕೆ ಅಡಿಕೆಯನ್ನು ತೆಗೆದುಕೊಂಡು ಹೋಗಿ ಕೊಡುವ ಬದಲಿಗೆ ನಿಮ್ಮ ಮನೆ ಬಾಗಿಲಲ್ಲಿಯೇ ಅಡಿಕೆ ಖರೀದಿ ಕೇಂದ್ರ ಸ್ಥಾಪನೆಯಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು. ಬಳಿಕ ಮಾಸ್ ಸಂಸ್ಥೆಯ ಬೆಳೆದು ಬಂದ ದಾರಿಯನ್ನು ವಿವರಿಸಿದರು.

ಮಾಸ್ ಸಂಸ್ಥೆಯ ನಿರ್ದೇಶಕ ನಿತ್ಯಾನಂದ ಮುಂಡೋಡಿ ಅಡಿಕೆ ಕತ್ತರಿಸುವ ಮೂಲಕ ನೂತನ ಅಡಿಕೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಉಬರಡ್ಕ ಮಿತ್ತೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಬರಡ್ಕ ಮಿತ್ತೂರು ಗ್ರಾ.ಪಂ.‌ ಅಧ್ಯಕ್ಷೆ ಪೂರ್ಣಿಮಾ, ಉಬರಡ್ಕ ಮಿತ್ತೂರು ಶ್ರೀ ನರಸಿಂಹ ದೇವಸ್ಥಾನದ ಮೊಕ್ತೇಸರ ವೆಂಕಟ್ರಮಣ ಕೆದಂಬಾಡಿ, ಜೋಡು ದೈವಗಳ ದೈವಸ್ಥಾನ ಉಬರಡ್ಕ ಮಿತ್ತೂರು ಇದರ ಅಧ್ಯಕ್ಷ ಜತ್ತಪ್ಪ ಗೌಡ, ಡಿ. ಸಿ. ಸಿ ಬ್ಯಾಂಕ್ ವಲಯ ಮೇಲ್ವಿಚಾರಕರು ರತನ್ ಕೆ.ಎಸ್, ಉಬರಡ್ಕ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಜಯಪ್ರಕಾಶ್ ಉರುಂಡೆ ಮತ್ತು ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ರವೀಂದ್ರ, ಉಬರಡ್ಕ ಮಿತ್ತೂರು ಪ್ರಾ.ಕೃ.ಪ.ಸ. ಸಂಘದ ಉಪಾಧ್ಯಕ್ಷ ರಾಜೇಶ್ ನೆಕ್ಕಿಲ, ಸಿ.ಇ.ಒ ಜಯಪ್ರಕಾಶ್. ಯು, ಮಾಸ್ ಲಿ. ಸಿ.ಇ.ಒ ಟಿ. ಮಹಾಬಲೇಶ್ವರ ಭಟ್, ಮುಖ್ಯ ಮಾರುಕಟ್ಟೆ ಅಧಿಕಾರಿ ಕೆ.ಎಂ. ಲೋಕೇಶ್, ಉಪಾಧ್ಯಕ್ಷ ಪ್ರದೀಪ ಯಡಿಯಾಳ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಪ್ರತಿಷ್ಠಿತ ಸಹಕಾರ ರತ್ನ ಪುರಸ್ಕೃತ ಶ್ರೀ ವೆಂಕಟರಮಣ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿಯ ಸ್ಥಾಪಕಾಧ್ಯಕ್ಷ ಪಿ.ಸಿ ಜಯರಾಮ, ಸಹಕಾರ ರತ್ನ ಸವಣೂರು ಸೀತಾರಾಮ ರೈ ಹಾಗೂ ನಿತ್ಯಾನಂದ ಮುಂಡೋಡಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದೀಕ್ಷಿತ ಪ್ರಾರ್ಥಿಸಿದರು, ಡಿ. ಮಹಾಬಲೇಶ್ವರ ಭಟ್ ಸ್ವಾಗತಿಸಿದರು. ರಾಜೇಶ್ ನೆಕ್ಕಿಲ ವಂದಿಸಿ, ಸಂಘದ ನಿರ್ದೇಶಕರಾದ ವಿಜಯ ಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಮಾಸ್ ಲಿಮಿಟೆಡ್ ಮಂಗಳೂರು ಹಾಗೂ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಉಬರಡ್ಕ ಮಿತ್ತೂರಿನ ನಿರ್ದೇಶಕರು, ಸಿಬ್ಬಂದಿ ವರ್ಗ ಹಾಗೂ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Latest Articles