ನ್ಯೂಸ್ ನಾಟೌಟ್: ಸುಳ್ಯದ ಜೇನು ಸೊಸೈಟಿಯಲ್ಲಿರುವ ಆಧುನಿಕ ಸಂಸ್ಕರಣಾ ಘಟಕಕ್ಕೆ ಮಂಗಳೂರಿನ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಮತ್ತು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಭೇಟಿ ನೀಡಿದ್ದಾರೆ. ಇದೇ ವೇಳೆ ಇಬ್ಬರು ಗಣ್ಯರನ್ನು ಹಾಲಿ ಜೇನು ಸೊಸೈಟಿಯ ಅಧ್ಯಕ್ಷ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ಸನ್ಮಾನಿಸಿದರು. ಇದೇ ವೇಳೆ ಇಬ್ಬರು ಗಣ್ಯರು ಕೂಡ ಹನಿ ಚಾಕೊಲೇಟ್ ಮತ್ತು ಹನಿ ಪೆಪ್ಪರ್ ಚಾಕೋಲೆಟ್ ಸವಿದರು. ಸುಪ್ರೀತ್ ಮೊಂಟಡ್ಕ ಮತ್ತು ಜೇನು ಸೊಸೈಟಿ ಸಿಬ್ಬಂದಿ ಉಪಸ್ಥಿತರಿದ್ದರು.













