ನ್ಯೂಸ್ ನಾಟೌಟ್ : ವಾಟ್ಸಪ್ನಲ್ಲಿ ಬರುವ ಮದುವೆ ಕಾರ್ಡ್ಗಳಲ್ಲಿಯೂ ವಂಚನೆ ಮಾಡಲು ಶುರುವಾಗಿದೆ. ವಿವಾಹ ಕಾರ್ಡ್ ನಕಲಿ ಗಳನ್ನು ತೆರೆಯುವ ಮೂಲಕ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ನೀವು ಕಳೆದುಕೊಳ್ಳವ ಸಾಧ್ಯತೆಗಳು ಇದೆ.
ಇತ್ತೀಚೆಗೆ ವರದಿ ಪ್ರಕಾರ, ಉತ್ತರ ಪ್ರದೇಶದಲ್ಲಿ ವಂಚಕರು ಬಿಜ್ನೋರ್ ಮತ್ತು ಅಮ್ರೋಹಾದಲ್ಲಿ ಜನರಿಂದ ಹಣ ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯಲು WhatsApp ನಲ್ಲಿ ನಕಲಿ ವಿವಾಹ ಆಮಂತ್ರಣಗಳನ್ನು ಬಳಸುತ್ತಿದ್ದಾರೆ. ಈ ನಕಲಿ ಆಮಂತ್ರಣಗಳ ಲಿಂಕ್ನ್ನು ವಾಟ್ಸಪ್ನಲ್ಲಿ ಕಳುಹಿಸಲಾಗುತ್ತದೆ. ಲಿಂಕ್ ತೆರೆದಾಗ ಅದು ಫೋನ್‌ನಲ್ಲಿ ವೈರಸ್ ಸೃಷ್ಟಿಸಿ ಫೋನ್‌ಗೆ ಸೋಂಕು ತರುತ್ತದೆ. ನಂತರ ನಿಮ್ಮ ಫೋನ್ನಲ್ಲಿರುವ ಎಲ್ಲ ಮಾಹಿತಿಗಳು ವಂಚಕರ ಕೈ ಸೇರುತ್ತದೆ. ಅದಕ್ಕಾಗಿ ಅವರು ವಿವಾಹ ಕಾರ್ಡ್‌ಗಳ ಬಳಕೆ ಮಾಡುತ್ತಾರೆ. ಒಂದು ವೇಳೆ ಈ ಲಿಂಕ್ನ್ನು ನೇರವಾಗಿ ಕಳುಹಿಸಿದ್ರೆ ಅನುಮಾನ ಬರುಬಹುದು ಎಂದು ಈ ಮದುವೆ ಕಾರ್ಡ್ಗಳನ್ನು ಉಪಯೋಗಿಸುತ್ತಾರೆ.
ವಂಚನೆಯ ಮದುವೆ ಕಾರ್ಡ್ apks ಸಹಾಯದಿಂದ, ಸ್ಕ್ಯಾಮರ್‌ಗಳು ಬ್ಯಾಂಕ್ ಖಾತೆಗಳು, ಪಾಸ್‌ವರ್ಡ್‌ಗಳು ಮತ್ತು ಸಂಪರ್ಕಗಳನ್ನು ಪ್ರವೇಶ ಮಾಡಿ. ನಿಮ್ಮ ಬ್ಯಾಂಕ್ನಲ್ಲಿರುವ ಹಣ ಮಾಯಾವಾಗಬಹುದು. ಕಳೆದ ಎರಡು ತಿಂಗಳಲ್ಲಿ ಬಿಜ್ನೋರ್‌ನಲ್ಲಿ ಇಂತಹ 15 ಪ್ರಕರಣಗಳು ವರದಿಯಾಗಿವೆ. ನವಭಾರತ್ ಟೈಮ್ಸ್ ವರದಿಯ ಪ್ರಕಾರ, ಧಂಪುರ ನಿವಾಸಿ ಡಾ. ಓಂಪ್ರಕಾಶ್ ಚೌಹಾಣ್ ಅವರಿಗೆ ಮದುವೆಯ ಆಮಂತ್ರಣ ಸಂದೇಶ ಬಂದು ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ತಕ್ಷಣ ಅವರ ಬ್ಯಾಂಕ್ ಖಾತೆಯಲ್ಲಿದ್ದ 31,000 ರೂ. ಹಣ ಹೋಗಿದೆ. ಈ ಬಗ್ಗೆ ಬಿಜ್ನೋರ್‌ನ ಹೆಚ್ಚುವರಿ ಎಸ್‌ಪಿ (ನಗರ) ಡಾ. ಕೃಷ್ಣ ಗೋಪಾಲ್ ಮಾತನಾಡಿ, ನಕಲಿ ಆಮಂತ್ರಣ ಪತ್ರಗಳು ಸಾಮಾನ್ಯವಾಗಿ APK ಫೈಲ್‌ಗಳಾಗಿ ಬರುತ್ತವೆ. ಜನರು ಈ ಫೈಲ್‌ಗಳನ್ನು ನಿಜವಾದ ಆಮಂತ್ರಣ ಪತ್ರಗಳೆಂದು ಭಾವಿಸಿ ಡೌನ್‌ಲೋಡ್ ಮಾಡುತ್ತಾರೆ. ಆಗ ಅವರ ಖಾತೆಯಲ್ಲಿ ಹಣ ಖಾಲಿಯಾಗುತ್ತದೆ.













