ನ್ಯೂಸ್ ನಾಟೌಟ್ : ಕಾಂತಾರ- 1′ ಸಿನಿಮಾ ಸೂಪರ್ ಹಿಟ್ ಆಗಿದೆ. ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿದೆ. ಜನವರಿಯಲ್ಲಿ ‘ಜೈ ಹನುಮಾನ್’ ಸಿನಿಮಾ ಚಿತ್ರೀಕರಣ ಆರಂಭವಾಗುತ್ತದೆ ಎನ್ನಲಾಗ್ತಿದೆ. ಈಗಾಗಲೇ ಕಥೆ ಒಪ್ಪಿ ಫೋಟೊಶೂಟ್ ಸಹ ಮಾಡಲಾಗಿದೆ. ಮುಂದೆ ಬಂಕಿಮ ಚಂದ್ರ ಚಟರ್ಜಿ ಬರೆದ ಕಾದಂಬರಿ ಆಧರಿತ ಚಿತ್ರದಲ್ಲಿ ಕೂಡ ರಿಷಬ್ ನಟಿಸುತ್ತಾರೆ ಎನ್ನುವ ಚರ್ಚೆ ನಡೀತಿದೆ.
ಸದ್ಯಕ್ಕೆ ರಿಷಬ್ ಶೆಟ್ಟಿ ಕನ್ನಡ ಸಿನಿಮಾಗಳಲ್ಲಿ ನಟಿಸುವುದು ಅನುಮಾನ. ಜೈ ಹನುಮಾನ್ ಬಳಿಕ ತೆಲುಗಿನ ಸಿತಾರಾ ಎಂಟರ್‌ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮಾಡಲು ಒಪ್ಪಿದ್ದಾರೆ. ಅಧಿಕೃತವಾಗಿ ಈ ಸಿನಿಮಾ ಘೋಷಣೆಯಾಗಿದೆ. ಶಿವಾಜಿ ಬಯೋಪಿಕ್ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಒಟ್ಟಾರೆ ದೊಡ್ಡ ದೊಡ್ಡ ಬಜೆಟ್‌ನಲ್ಲಿ ಭಾರೀ ಸಿನಿಮಾಗಳಲ್ಲಿ ಡಿವೈನ್ ಸ್ಟಾರ್ ಬಣ್ಣ ಹಚ್ಚುತ್ತಿದ್ದಾರೆ.













