ನ್ಯೂಸ್ ನಾಟೌಟ್ : ಭರತ ನಾಟ್ಯ ಮಾಡುತ್ತಲೇ ಅಂಜನಾದ್ರಿ ಬೆಟ್ಟವನ್ನು 8 ನಿಮಿಷ 59 ಸೆಂಕೆಂಡಗಳಲ್ಲಿ ಏರಿ ಕಲಾವಿದೆ ಆರ್.ಹರ್ಷಿತಾ ಗಮನ ಸೆಳೆದಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆಯ ಆರ್.ಹರ್ಷಿತಾ ಭರತನಾಟ್ಯ ಮಾಡುತ್ತಲೇ ಅಂಜನಾದ್ರಿ ಬೆಟ್ಟ ಏರಿ ಸೇವೆ ಸಲ್ಲಿಸುವುದಾಗಿ ಹರಕೆ ಹೊತ್ತಿದ್ದರು. ಅದರಂತೆ ಪಾಲಕರ ಮಾರ್ಗದರ್ಶನದಲ್ಲಿ ಹನುಮದ್ ವ್ರತಾಚರಣೆ ಸಂದರ್ಭದಲ್ಲಿ 574 ಮೆಟ್ಟಿಲುಗಳ ಮೇಲೆ ವಿವಿಧ ಭಂಗಿಯಲ್ಲಿ ನಾಟ್ಯ ಮಾಡುತ್ತಾ ಹತ್ತಿದ್ದಾರೆ.
ಹನುಮಮಾಲಾ ವಿಸರ್ಜನೆ ನಿಮಿತ್ತ ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟಕ್ಕೆ ಲಕ್ಷಾಂತರ ಭಕ್ತಾದಿಗಳು ಹರಿದು ಬಂದಿತು. ಇಡೀ ಅಂಜನಾದ್ರಿ ಬೆಟ್ಟವೇ ಕೇಸರಿಮಯವಾಗುವಂತೆ ಮಾಡಿತು. ಅದರಲ್ಲೂ ಬೆಳ್ಳಂಬೆಳಗ್ಗೆ ಸೂರ್ಯನ ಹೊಂಗಿರಣ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯ ಮೇಲೆ ಬಿದ್ದಾಗ ಈ ಕೇಸರಿಮಯ ಸೊಬಗು ಮತ್ತಷ್ಟು ರಂಗು ಪಡೆದುಕೊಂಡಿರುವುದು ಕಂಡು ಬಂದಿತು.
ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಹನುಮಾಲಾಧಾರಿಗಳು ಗೊತ್ತು ಮಾಡಿದ್ದ ಜಾಗದಲ್ಲಿ ಹನುಮ ಮಾಲೆ ವಿಸರ್ಜನೆ ಮಾಡಿ ತುಂಗಭದ್ರಾ ಅಥವಾ ಸ್ನಾನ ಘಟ್ಟಗಳಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸಿ ಅಂಜನಾದ್ರಿ ಬೆಟ್ಟ ಏರುತ್ತಿದರು.













