27.7 C
Sullia
Sunday, March 8, 2026

ಮಕ್ಕಳು ತನಗಿಂತ ಸುಂದರವಾಗಿದ್ದಾರೆ ಅಂತ ಮಕ್ಕಳ ಜೀವ ತೆಗೆದ ತಾಯಿ!, ಸ್ವಂತ ಮಗ ಸೇರಿ ನಾಲ್ವರು ಸಾವು, ಈಕೆ ತಾಯಿಯೋ? ರಾಕ್ಷಸಿಯೋ?

ನ್ಯೂಸ್ ನಾಟೌಟ್ : ಹರಿಯಾಣದ ಪಾಣಿಪತ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಾಯಿಯೊಬ್ಬಳು  ಮಕ್ಕಳು ತನಗಿಂತ ಸುಂದರವಾಗಿದ್ದಾರೆ ಅಂತ ಸ್ವಂತ ಮಗ ಸೇರಿ 4 ಮಕ್ಕಳ ಜೀವ ತೆಗೆದಿದ್ದಾಳೆ. 


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಹೆಸರು ಪೂನಮ್‌.. ಇವಳು ತಾಯಿ ಅನ್ನೋ ಪದ ಕರೆಸಿಕೊಳ್ಳಲು ಯೋಗ್ಯಳಲ್ಲ. ಅದೆಂಥಾ ಕ್ರೂರ ಮನಸ್ಥಿತಿ ಈಕೆಯದ್ದು ಅನ್ನೋದು ಗೊತ್ತಾಗಿದೆ. ತನಗಿಂತ ಸುಂದರವಾಗಿದ್ದಾರೆ ಅಂತ ಸ್ವಂತ ಮಗ ಸೇರಿ ನಾಲ್ವರನ್ನ ಈ ಪೂನಮ್ ಮುಗಿಸಿದ್ದಾಳೆ.

ತನಗಿಂತ ಸುಂದರವಾಗಿದ್ದಾರೆ ಅಂತ ಪೂನಮ್ ನಾಲ್ವರನ್ನ ಮು*ಸಿರೋದು ಬೆಳಕಿಗೆ ಬಂದಿದೆ. ಹರಿಯಾಣದ ಪಾಣಿಪತ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ತನ್ನ ಸೋದರಿಯ 6 ವರ್ಷದ ಮಗಳನ್ನ ನೀರಲ್ಲಿ ಮುಳುಗಿಸಿ ಈಗ ಸಿಕ್ಕಿಬಿದ್ದಿದ್ದಾಳೆ. ಪೂನಮ್ ಸಂಬಂಧಿಯಾಗಿದ್ದ ಬಾಲಕಿ ನಾಪತ್ತೆಯಾಗಿದ್ದಾಳೆ ಅನ್ನೋ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರ ತನಿಖೆ ಶುರು ಮಾಡಿದ್ರು. ಈ ವೇಳೆ ಬಾಲಕಿ ವಿಧಿ ನೀರಿನ ತೊಟ್ಟಿಯಲ್ಲಿ ಮುಳುಗಿ ಸಾ*ನ್ನಪ್ಪಿದ್ದಾಳೆ ಅನ್ನೋದು ಬೆಳಕಿಗೆ ಬಂದಿತ್ತು. 

ಶಂಕೆ ಮೇರೆಗೆ ಬಾಲಕಿಯ ಚಿಕ್ಕಮ್ಮನನ್ನ (ಪೂನಮ್​) ಪೊಲೀಸರು ಬಂಧಿಸಿದ್ರು. ವಿಚಾರಣೆ ವೇಳೆ ಕೊ*ಗಾತಿ ಪೂನಮ್ ಅನೇಕ ವಿಷಯ ಬಾಯ್ಬಿಟ್ಟಿದ್ದಾಳೆ. ತನಗಿಂತ ನೋಡಲು ಸುಂದರವಾಗಿದ್ದಾರೆ ಅಂತ ಇತರ ಮೂರು ಮಕ್ಕಳನ್ನ ಈ ಹಿಂದೆ ಕೊ* ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. 2023, ಸೋನಿಪತ್‌ನಲ್ಲಿ ಇಬ್ಬರು ಮಕ್ಕಳನ್ನ ಈಕೆ ಕೊ* ಮಾಡಿದ್ದಳಂತೆ. ಅಲ್ಲದೇ ತನ್ನ ಮಗ ಸೇರಿ ನಾದಿನಿಯ ಮಗಳನ್ನ ಪೂನಮ್‌ ಕೊಂ*ದ್ದಳಂತೆ. ಕಳೆದ ಆಗಸ್ಟ್‌ನಲ್ಲಿ ತನ್ನ ಸೋದರ ಸಂಬಂಧಿಯ ಮಗಳನ್ನೂ ಕೊ*ಗೈದಿದ್ದಳಂತೆ. ಹೀಗೆ ಹೀಗೆ ಸ್ವಂತ ಮಗ ಸೇರಿ ನಾಲ್ವರನ್ನ ಕೊಂದ ಪೂನಮ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಈಕೆ ಮಹಿಳೆಯಲ್ಲ.. ತಾಯಿಯಂತೂ ಅಲ್ವೇ ಅಲ್ಲ.. ಇಂಥಹ ರಾಕ್ಷಸಿ ಮನಸ್ಸಿನ ಮಹಿಳೆಗೆ ದೇವರು ಮಕ್ಕಳನ್ನ ಕರುಣಿಸಿದ್ದಾದ್ರೂ ಏಕೆ ಅನ್ನೋದು ಸ್ಥಳೀಯರ ಪ್ರಶ್ನೆ

Related Articles

LEAVE A REPLY

Please enter your comment!
Please enter your name here

Latest Articles