37.4 C
Sullia
Sunday, March 8, 2026

ಅಜ್ಜಾವರದಲ್ಲಿ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ, ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾದ ಅಂಜಲಿ ಮೊಂಟೆಸ್ಸರಿ ಮುಖ್ಯಸ್ಥೆ ಗೀತಾಂಜಲಿ

ನ್ಯೂಸ್ ನಾಟೌಟ್: ಇತ್ತೀಚೆಗೆ ಅಜ್ಜಾವರದಲ್ಲಿ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಅಜ್ಜಾವರ, ಅರಿವು ಕೇಂದ್ರ, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಅಜ್ಜಾವರ ಹಾಗೂ ಡಾ. ಕೆ. ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ – ಪೆರುವಾಜೆ ಇದರ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಹಯೋಗದಲ್ಲಿ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯದ ಮುದ್ದು ಮಕ್ಕಳ ಶಾಲೆ ಅಂಜಲಿ ಮೊಂಟೆಸ್ಸರಿಯ ಮುಖ್ಯಸ್ಥೆ ಗೀತಾಂಜಲಿಯವರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವುದರ ಬಗ್ಗೆ ಗೀತಾಂಜಲಿಯವರು ಮಾತನಾಡಿದರು. ಇದೇ ವೇಳೆ ಹಲವಾರು ಮಂದಿ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles