37.4 C
Sullia
Sunday, March 8, 2026

ಮದುವೆಯಾದ ಮಾರನೇ ದಿನವೇ ನವವಿವಾಹಿತ ಹೃದಯಾಘಾತಕ್ಕೆ ಬಲಿ:

ನ್ಯೂಸ್ ನಾಟೌಟ್ : ಭಾನುವಾರ (ನ.30) ಹರಪ್ಪನಹಳ್ಳಿ ಸಮೀಪದ ಬಂಡ್ರಿಯ ಮಧುವನ್ನು ವರಿಸಿದ್ದ ರಮೇಶ್ ಸೋಮವಾರ (ಡಿ.1) ಹೃದಯಾಘಾತದಿಂದ ಮೃತಪಟ್ಟ ಘಟನೆ ಬಗ್ಗೆ ವರದಿಯಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಶಿವಮೊಗ್ಹೊಗದ ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ನವವಿವಾಹಿತ ರಮೇಶ್ (30) ಮೃತ ಪಟ್ಟ ನವವಿವಾಹಿತ ಎಂದು ಗುರುತಿಸಲಾಗಿದೆ.

ಮದುವೆಯಾದ ನಂತರ ರಮೇಶ್‌ ವಧುವಿನ‌ ಮನೆಗೆ ತೆರಳಿದ್ದರು. ದೇವಸ್ಥಾನದಿಂದ ಮೆರವಣಿಗೆ ಮೂಲಕ ವಧುವಿನ ಮನೆಗೆ ಕರೆದುಕೊಂಡು ಹೋಗಿದ್ದರು. ವಧುವಿನ ಮನೆ ತಲುಪಿದ ರಮೇಶ್ ದಂಪತಿ ದೇವರಿಗೆ ಕೈ ಮುಗಿಯಲು ತೆರಳಿದ ವೇಳೆ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಕರೆಯೊಯ್ಯುವ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು.ಮಂಗಳವಾರ ಹೊಸಕೊಪ್ಪದಲ್ಲಿ ರಮೇಶ್‌ ಅಂತ್ಯಕ್ರಿಯೆ ನಡೆಯಿತು.

1 ವರ್ಷದ ಹಿಂದೆ ನಿಶ್ಚಯವಾಗಿದ್ದ ವಧುವಿನೊಂದಿಗೆ ಭಾನುವಾರ ಶಿವಮೊಗ್ಗದ ಬಿ.ಹೆಚ್ ರಸ್ತೆಯ ಗಂಗಾ ಪ್ರಿಯಾ ಕಲ್ಯಾಣ ಮಂಟಪದಲ್ಲಿ ರಮೇಶ್‌ ಅವರ ಮದುವೆ ನಡೆದಿತ್ತು.

Related Articles

LEAVE A REPLY

Please enter your comment!
Please enter your name here

Latest Articles