ನ್ಯೂಸ್ ನಾಟೌಟ್ : ದಕ್ಷಿಣ ಕಾಶ್ಮೀರ ಕೊಡಗು ಜಿಲ್ಲೆಯಲ್ಲಿ ಚಳಿ ವಿಪರೀತವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಜನರಿಗೆ ಚಳಿಯ ಅನುಭವ ಉಂಟಾಗುತ್ತಿದೆ. ಜೊತೆಗೆ ಗಾಳಿ, ಆಗಾಗ್ಗೆ ತುಂತುರು ಮಳೆ ಮೈನಡುಗುವಂತೆ ಮಾಡುತ್ತಿದೆ. ಬೆಳಿಗ್ಗೆ, ಸಂಜೆ ವೇಳೆಯಲ್ಲಿ ಚಳಿ (Cold) ಜೋರಾಗಿದ್ದು ನಿತ್ಯ ಕೆಲಸಗಳಿಗೆ ಜನ ಹೋಗಲು ಪರದಾಡುತ್ತಿದ್ದಾರೆ.
ಸ್ವೆಟರ್, ಕಂಬಳಿ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ಇದನ್ನೇ ಸದುಪಯೋಗ ಪಡಿಸಿಕೊಳ್ಳುತ್ತಿರುವ ಕೆಲ ವ್ಯಾಪಾರಿಗಳು ದುಬಾರಿ ಬೆಲೆಗೆ ಮಾರಿ ಆದಾಯ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಈ ಬಾರಿ ನವೆಂಬರ್ ಅಂತ್ಯದಿಂದಲೇ ಮೈಕೊರೆವ ಚಳಿಯ ವಾತಾವರಣ ಆರಂಭವಾಗಿದೆ. ಈ ಬಾರಿ ತಾಪಮಾನ ಮಡಿಕೇರಿಯಲ್ಲಿ ಕನಿಷ್ಠ ತಾಪಮಾನ 11 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹೀಗಾಗಿ ಬೆಳಗ್ಗೆ ವಾಕಿಂಗ್‌ಗೆ ತೆರಳುವವರು ಹಾಸಿಗೆಯಲ್ಲಿ ಬೆಚ್ಚನೆಯ ನಿದ್ರೆಗೆ ತಲೆಗೊಡುತ್ತಿದ್ದಾರೆ. ಹಾಲು, ಪೇಪರ್ ವಿತರಕರಿಗೂ ಕೆಲಸ ಮಾಡೋದು ಸವಾಲೇ ಆಗಿದೆ.













