27.7 C
Sullia
Sunday, March 8, 2026

‘ಕಾಂತಾರ 1’ ಚಿತ್ರದ ದೈವವನ್ನು ‘ಸ್ತ್ರೀ ದೆವ್ವ’ ಎಂದ ಬಾಲಿವುಡ್ ನಟ..! ರಣವೀರ್ ಸಿಂಗ್ ವಿರುದ್ಧ ಭುಗಿಲೆದ್ದ ಆಕ್ರೋಶ

ನ್ಯೂಸ್ ನಾಟೌಟ್: ದೇಶ-ವಿದೇಶಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಕಾಂತಾರ ಚಾಪ್ಟರ್ 1 ಚಿತ್ರದ ಬಗ್ಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ‘ಕಾಂತಾರ 1’ ಚಿತ್ರದ ದೈವವನ್ನು ‘ಸ್ತ್ರೀ ದೆವ್ವ’ ಎಂದು (Female Ghost) ಆಡಿದ ಮಾತು ಇದೀಗ ವಿವಾದಕ್ಕೆ ಕಾರಣವಾಗಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಎದುರಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಶುಕ್ರವಾರ ಗೋವಾದಲ್ಲಿ ನಡೆದ IFFI 2025ರ ಸಮಾರೋಪ ಸಮಾರಂಭದಲ್ಲಿ ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಭಾಗಿಯಾಗಿದ್ದರು. ಈ ವೇಳೆ, ರಿಷಬ್ ಎದುರಿನಲ್ಲೇ ಕಾಂತಾರ ಸೀಕ್ವೆಲ್ ಬಗ್ಗೆ, ರಿಷಬ್ ಶೆಟ್ಟಿಯವರ ನಟನೆಯನ್ನು ಹೊಗಳಿ ಮಾತನ್ನಾಡಿದ್ದಾರೆ. ಇದೇ ವೇಳೆ ರಿಷಬ್ ನಟನೆ ಹೊಗಳುತ್ತ ಅನುಕರಣೆ ಮಾಡುತ್ತ ಅದರಲ್ಲಿ ಇರುವ ‘ದೈವ’ವನ್ನು ‘ಫೀಮೇಲ್ ಘೋಸ್ಟ್’ ಎಂದು ಹೇಳಿ ಭಾರೀ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ರಣವೀರ್ ಸಿಂಗ್ ಅವರು ‘ದೈವ’ವನ್ನು ‘ದೆವ್ವ’ ಎಂದಿದ್ದಲ್ಲದೇ ರಿಷಬ್ ಎದುರಿನಲ್ಲೇ ಅವರನ್ನು ಅನುಕರಣೆ ಮಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಘಟನೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಚರ್ಚೆಗೆ ಗುರಿಯಾಗಿ, ನಟ ರಣವೀರ್ ಸಿಂಗ್ ಬಗ್ಗೆ ಹಲವು ಜನರು ತೀರಾ ಆಕ್ಷೇಪ ವ್ಯಕ್ತಪಡಿಸುತ್ತಿದ್ದು ಅದೀಗ ವಿವಾದವಾಗುವತ್ತ ಸಾಗಿದೆ. ರಣವೀರ್ ಸಿಂಗ್ ಅವರ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಇದೀಗ ತೀವ್ರ ಚರ್ಚೆ ಆರಂಭವಾಗಿದೆ.

Related Articles

LEAVE A REPLY

Please enter your comment!
Please enter your name here

Latest Articles