27.7 C
Sullia
Sunday, March 8, 2026

ಸುಳ್ಯ: ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನಾಚರಣೆ

ನ್ಯೂಸ್‌ ನಾಟೌಟ್: ಸುಳ್ಯದ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ನ. 27 ರಂದು ಸಂವಿಧಾನ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ. ಟೀನಾ ಎಚ್ ಎಸ್ ವಹಿಸಿದ್ದರು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಸಂಪನ್ಮೂಲ ವ್ಯಕ್ತಿಗಳಾದ ಕಾಲೇಜಿನ ಉಪನ್ಯಾಸಕಿ ಸುಚಿತ್ರ ಜೆ, ಸಾಂವಿಧಾನಿಕ ನೈತಿಕತೆಯ (Constitutional Morality) ಪರಿಕಲ್ಪನೆ, ಅದರ ಐತಿಹಾಸಿಕ ಬೇರುಗಳು, ಭಾರತೀಯ ನ್ಯಾಯಶಾಸ್ತ್ರದಲ್ಲಿ ಅದರ ವಿಕಾಸ, ಮತ್ತು ವಿಶೇಷವಾಗಿ ಧರ್ಮದ ಮೂಲಭೂತ ಹಕ್ಕಿಗೆ ಸಂಬಂಧಿಸಿದಂತೆ ಸಾಂವಿಧಾನಿಕ ನೈತಿಕತೆಯು ಹೇಗೆ ಅನ್ವಯಿಸುತ್ತದೆ ಎಂಬುದನ್ನು ವಿಶ್ಲೇಷಿಸಿದರು. ಕಾಲೇಜಿನ ಆಡಳಿತಧಿಕಾರಿ ಪ್ರೊ.ಕೆ. ವಿ ದಾಮೋದರ ಗೌಡ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಉಪನ್ಯಾಸಕಿ ನಯನ ಪಿ ಯು. ಸಂವಿಧಾನ ಪೀಠಿಕೆಯ ವಚನ ವಾಚಿಸಿದರು. ವಿದ್ಯಾರ್ಥಿನಿ ಜಯಂತಿ ಡಯಾಸ್ ಪ್ರಾರ್ಥಿಸಿ, ಕಾಲೇಜಿನ ಕಾನೂನು ನೆರವು ಘಟಕದ ಕಾರ್ಯಕ್ರಮ ಸಂಯೋಜಕಿ ಉಪನ್ಯಾಸಕಿ, ರಚನ ಕೆ. ವಂದಿಸಿದರು. ವಿದ್ಯಾರ್ಥಿನಿ ಪ್ರಲೋಕ್ಷಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Latest Articles