27.7 C
Sullia
Sunday, March 8, 2026

ಸೋಣಂಗೇರಿ: ಶ್ರೀಕೃಷ್ಣ ಭಜನಾ ಮಂದಿರಕ್ಕೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ, ನಿರ್ಮಾಣ ಕಾರ್ಯ ವೀಕ್ಷಣೆ

ನ್ಯೂಸ್ ನಾಟೌಟ್: ಸುಳ್ಯದ ಸೋಣಂಗೇರಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಧಾರ್ಮಿಕ ಮುಖಂಡ ಹಾಗೂ ಸಮಾಜ ಸೇವಕರಾದ ಕಿರಣ್ ಚಂದ್ರ ಪುಷ್ಪಗಿರಿಯವರು ಇಂದು (ನ.28) ಭೇಟಿ ನೀಡಿದರು. ನಿರ್ಮಾಣ ಕಾರ್ಯವನ್ನು ವೀಕ್ಷಣೆ ಮಾಡಿದರು. ಬಳಿಕ ಮಂದಿರದ ಆಡಳಿತ ಸಮಿತಿಯ ಸದಸ್ಯರೊಂದಿಗೆ ನೂತನ ಮಂದಿರ ನಿರ್ಮಾಣ ಮತ್ತು ಮುಂದಿನ ಅಭಿವೃದ್ಧಿ ಕುರಿತಾಗಿ ಸಮಾಲೋಚನೆ ನಡೆಸಿದರು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಇದೇ ವೇಳೆ ಮಾತನಾಡಿದ ಅವರು, ‘ ಮುಂದಿನ ದಿನಗಳಲ್ಲಿ ಮಂದಿರದ ನಿರ್ಮಾಣ ಕೆಲಸ ಪೂರ್ಣಗೊಳ್ಳಲು ಎಲ್ಲ ರೀತಿಯಲ್ಲಿಯೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸುಪ್ರೀತ್ ಮೋoಟಡ್ಕ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪ್ರಮೋದ್ ದಿಡುಪೆ, ಭಜನಾ ಮಂದಿರ ಸಮಿತಿಯ ಅಧ್ಯಕ್ಷ ಗಿರಿಧರ ಗೌಡ ನಾಯರ್ ಹಿತ್ಲು , ಕರುಣಾಕರ ಉಜಿರೆ, ಧನುಷ್ ಕೊಕ್ಕಡ, ಭರತ್ ಕುಪ್ಪೆಟ್ಟಿ, ಕಾರ್ಯದರ್ಶಿ ನಿರಂಜನ ಮಿತ್ತಮಜಲು, ಕೋಶಾಧಿಕಾರಿ ಲೀಲಾವತಿ ನಡುಮನೆ, ಗೌರವ ಸಲಹೆಗಾರರಾದ ಎಸ್.ಎನ್. ಗೋಪಾಲಕೃಷ್ಣ, ಚಿದಾನಂದ ಗೋಪಾಲಕಜೆ, ಸದಾನಂದ ಹುಲಿಮನೆ, ಎಸ್.ಕೆ. ಭಾಸ್ಕರ ಗೌಡ ಕುಂಟಿಕಾನ, ಎಸ್.ಎನ್. ಲೋಕೇಶ್ ನಡುಮನೆ, ಸುಂದರ ರೈ ಶಾಂತಿನಗರ, ಎಸ್.ಎನ್. ರವೀಂದ್ರ ನಡುಮನೆ ಮತ್ತು ಸದಸ್ಯರಾದ ಮೋಹಿನಿ ನಡುಮನೆ, ಶುಭಾ ಕಾಡುತೋಟ, ಪ್ರಿಯಾಂಕ ಎಸ್.ಎನ್. ಸೋಣಂಗೇರಿ, ಪುರುಷೋತ್ತಮ ಆಚಾರ್ಯ ಕೆದಿಕ್ಕಾನ, ಹಿಮಾಂಶು ಬಿ.ಸಿ. ಸೋಣಂಗೇರಿ, ಮಂಜುನಾಥ ಮಡ್ತಿಲ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Latest Articles