ನ್ಯೂಸ್ ನಾಟೌಟ್ :ಮಡಿಕೇರಿಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ನಡೆಯಿತು. 3 ದಿನಗಳ ಕಾಲ ನಡೆಯುವ ಕೊಡಗು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಮೊದಲ ದಿನ ಸುಮಾರು ನೂರಕ್ಕೂ ಅಧಿಕ ಪೊಲೀಸರು ಪಾಲ್ಗೊಂಡು ಮೈದಾನದಲ್ಲಿ ತಮ್ಮ ಕ್ರೀಡಾ ಪ್ರತಿಭೆಯನ್ನು ಮೆರೆದರು.
ಮೊದಲ ದಿನ ಒಟ್ಟು 24 ವಿಭಾಗಗಳಲ್ಲಿ ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ರೀಡೆಗಳು ಜರುಗಿದವು. ಬಿರು ಬಿಸಿಲಿನ ಮಧ್ಯೆಯೂ ಪೊಲೀಸರು ವಿವಿಧ ಆಟಗಳನ್ನು ಆಡಿ ಸಂಭ್ರಮಿಸಿದರು.
ಪಿಸ್ತೂಲ್ ಶೂಟಿಂಗ್ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರೇ ಮೊದಲ ಸ್ಥಾನ ಪಡೆದರೆ, ಡಿವೈಎಸ್ಪಿಗಳಾದ ಸೂರಜ್ ದ್ವಿತೀಯ ಹಾಗೂ ಮಹೇಶ್ಕುಮಾರ್ ತೃತೀಯ ಸ್ಥಾನ ಪಡೆದರು.
ರೈಫಲ್ ಶೂಟಿಂಗ್ನಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ಕುಮಾರ್ ಪ್ರಥಮ ಸ್ಥಾನ ಪಡೆದರೆ, ಎಸ್.ಪಿ.ರಾಮರಾಜನ್ ದ್ವಿತೀಯ, ಡಿವೈಎಸ್ಪಿ ಮಹೇಶ್ ಕುಮಾರ್ ತೃತೀಯ ಸ್ಥಾನ ಪಡೆದರು.













