21.6 C
Sullia
Sunday, March 8, 2026

ಅಪಘಾತಕ್ಕೀಡಾದ ಬೆಳ್ತಂಗಡಿಯ ಯುವಕ ದೀಕ್ಷಿತ್ ಗೆ ಎರಡೆರಡು ಸರ್ಜರಿ, ಸಂಕಷ್ಟದಲ್ಲಿದೆ ಬಡ ಕುಟುಂಬ

ನ್ಯೂಸ್ ನಾಟೌಟ್: ಇತ್ತೀಚೆಗೆ ಬೆಂಗಳೂರಿನಿಂದ ಊರಿಗೆ ಬರುವ ಸಂದರ್ಭದಲ್ಲಿ ಚೆನ್ನರಾಯಪಟ್ಟಣದ ಉದಯಪುರ ಬಳಿ ಬೈಕ್ ಅಪಘಾತಕ್ಕೀಡಾಗಿ ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಮೈಂದಕೋಡಿ ಮನೆಯ ಕೇಶವ ಮತ್ತು ಪ್ರೇಮ ದಂಪತಿಗಳ ಪುತ್ರ ದೀಕ್ಷಿತ್ ಕಾಲಿಗೆ ಗಂಭೀರ ಗಾಯವಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಸದ್ಯ ಯುವಕನ ಕಾಲಿಗೆ ಒಂದು ಸಲ ಹಾಸನದ ಆಸ್ಪತ್ರೆಯಲ್ಲಿ ಸರ್ಜರಿ ಮಾಡಲಾಗಿದೆ. ಇದೀಗ ಹೆಚ್ಚಿನ ಮಂಗಳೂರಿನ ಕೆಎಸ್ ಹೆಗ್ಡೆ ಆಸ್ಪತ್ರೆಗೆ ಕರೆ ತರಲಾಗಿದೆ. ಈ ವೈದ್ಯರು ಇನ್ನೊಮ್ಮೆ ಸರ್ಜರಿ ಮಾಡಬೇಕು ಎಂದು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕುಟುಂಬ ವರ್ಗ ಸರ್ಜರಿಗೆ ಮುಂದಾಗಿದೆ. ಈಗಾಗಲೇ 2 ಲಕ್ಷ ರೂ. ಖರ್ಚು ಆಗಿದೆ. ತಂದೆ 25 ವರ್ಷದಿಂದ ಮಾನಸಿಕ ರೋಗಿಯಾಗಿದ್ದು ಕೆಲಸಕ್ಕೆ ಹೋಗುವುದಿಲ್ಲ. ತಾಯಿ ದುಡಿದು ಮಗನನ್ನು ಇಲ್ಲಿ ತನಕ ಬೆಳೆಸಿದ್ದರು. ಇದುವರೆಗೆ ಸ್ವಾಭಿಮಾನದಿಂದ ಬದುಕುತ್ತಿದ್ದ ಕುಟುಂಬ ಇದೀಗ ಅನಿವಾರ್ಯವಾಗಿ ಮಗನ ಸರ್ಜರಿಗೆ ನಿಮ್ಮ ಮುಂದೆ ಕೈ ಚಾಚುತ್ತಿದೆ. ನಿಮ್ಮೆಲ್ಲರ ಸಹಕಾರದಿಂದ ದೀಕ್ಷಿತ್ ಚೇತರಿಸಿಕೊಳ್ಳಬಹುದು. ಕ್ಯೂರ್ ಆರ್ ಕೋಡ್ ನೀಡಲಾಗಿದೆ. ನಿಮ್ಮ ಕೈಲಾದಷ್ಟು ಸಹಾಯ ಮಾಡಬೇಕೆಂದು ಕುಟುಂಬ ವರ್ಗ ಮನವಿ ಮಾಡಿಕೊಂಡಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: +91 98454 52493

Related Articles

LEAVE A REPLY

Please enter your comment!
Please enter your name here

Latest Articles