27.7 C
Sullia
Sunday, March 8, 2026

ಹಾಸನ : ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ,ಇಬ್ಬರು ಮೃತ್ಯು; ತಂಗಿಯ ಆರತಕ್ಷತೆಗೆ ಮೊಸರು ತರಲು ಹೋಗಿದ್ದ ಸಹೋದರ!

ನ್ಯೂಸ್ ನಾಟೌಟ್ : ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ, ಮುತ್ತಗನ್ನೆ ಗ್ರಾಮದ ಬಳಿ ನಡೆದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಬೇಲೂರು ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಲೋಕೇಶ್ (25),‌ ಹಾಗೂ ಚಿಕ್ಕಮಗಳೂರು ಜಿಲ್ಲೆ, ರಾಮೇನಹಳ್ಳಿ ಗ್ರಾಮದ ಕಿರಣ್ (32) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಲೋಕೇಶ್ ತಂಗಿ ಆರತಕ್ಷತೆ ಕಾರಣ ಮಜ್ಜಿಗೆ, ಮೊಸರು ತರಲು ಹೀರೋ ಸ್ಪ್ಲೆಂಡರ್‌ ಬೈಕ್‌ನಲ್ಲಿ ಬೇಲೂರಿಗೆ ತೆರಳುತ್ತಿದ್ದರು. ಈ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಶಂಕಿಸಲಾಗಿದೆ.ಡಿಕ್ಕಿ ಹೊಡೆದ ರಭಸಕ್ಕೆ ಭಾವ-ಭಾಮೈದರಾದ ಲೋಕೇಶ್ ಹಾಗೂ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.‌ ಮೃತದೇಹಗಳು ಇದ್ದ ಜಾಗದಿಂದ 10 ಅಡಿ ದೂರದಲ್ಲಿ ಬೈಕ್ ಬಿದ್ದಿದೆ.‌ 

Related Articles

LEAVE A REPLY

Please enter your comment!
Please enter your name here

Latest Articles