21.6 C
Sullia
Sunday, March 8, 2026

ಪದೇ ಪದೇ ಬಿಸಿನೀರು ಕೇಳಿದ್ದಕ್ಕೆ ಮದುವೆಯೇ ನಿಂತೋಯ್ತು, ವರನನ್ನು ಹುಚ್ಚ ಎಂದ ವಧು!!


Ad Widget
Ad Widget
Ad Widget
Ad Widget
Ad Widget
Ad Widget
Ad Widget

ನ್ಯೂಸ್ ನಾಟೌಟ್ : ವಧು ತಾನು ಮದುವೆ ಆಗಬೇಕಿದ್ದ ವರನ ನಡವಳಿಕೆ ಬಗ್ಗೆ ಆರೋಪ ಮಾಡಿದ್ದಾಳೆ. ಇದರಿಂದ ಮದುವೆಯೇ ನಿಂತೋಗಿದೆ. ಈ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಸಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಳ್ಳಿಯೊಂದರಲ್ಲಿ ನಡೆದಿದೆ.

ಈ ಹಳ್ಳಿಯಲ್ಲಿ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮಕ್ಕೆ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದರು. ಮದುವೆ ಮೆರವಣಿಗೆ ಕೂಡ ಆರಂಭವಾಗಿತ್ತು. ಆದರೆ ವಧು ಈ ಮೆರವಣಿಗೆಯಲ್ಲಿ ಬರಲು ಹಿಂದೇಟು ಹಾಕಿದ್ದಾಳೆ. ಮದುವೆಗೂ ಕೂಡ ಎಲ್ಲ ತಯಾರಿಗಳನ್ನು ಮನೆಯವರು ಮಾಡಿಕೊಂಡಿದ್ದಾರೆ. ಆದರೆ ವರ ವರ್ತನೆ ನೋಡಿ ಮದುವೆ ಆಗಲು ವಧು ಒಲ್ಲೆ ಎಂದಿದ್ದಾಳೆ.

ವಧು, ವರ ಮತ್ತು ಅವನ ಸಂಬಂಧಿಕರ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ಮದುವೆ ಮೆರವಣಿಗೆಗೆ ವರ ಕಡೆಯವರು ತಡವಾಗಿ ಬಂದಿದ್ದಾರೆ. ಹಾಗೂ ಕೆಲವರು ಅದರಲ್ಲಿ ಕುಡಿದಿದ್ದರು. ಜತೆಗೆ ವರನು ಪದೇ ಪದೇ ಬಿಸಿನೀರು ಕೇಳುತ್ತಿದ್ದ, ಅವನು ಹುಚ್ಚನಂತೆ ಆಡುತ್ತಿದ್ದ ಎಂದು ವಧು ದೂರಿದ್ದಾಳೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ತಮ್ಮ ಮಗನನ್ನು ಹುಚ್ಚ ಎಂದು ಕರೆದಿದ್ದಕ್ಕೆ ವರನ ಕುಟುಂಬದವರು ವಧುವಿನ ವಿರುದ್ಧ ಆಕ್ರೋಶಗೊಂಡಿದ್ದು, ದೊಡ್ಡ ಜಗಳವೇ ನಡೆದಿದೆ. ಮದುವೆಗೆ ಬಂದಿದ್ದ ಸಂಬಂಧಿಕರು ಇವರ ಜಗಳ ನೋಡಿ ಅಲ್ಲಿಂದ ಹೋಗಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles