27.7 C
Sullia
Sunday, March 8, 2026

ನಾಳೆ ಕೃಷ್ಣನೂರಿಗೆ ಪ್ರಧಾನಿ ನರೇಂದ್ರ ಮೋದಿ, ಪೊಲೀಸ್ ಬಿಗಿ ಭದ್ರತೆ; ಒಂದು ಲಕ್ಷ ಮಂದಿಯಿಂದ ಗೀತಾ ಪಠಣ,ಶಾಲೆಗಳಿಗೆ ರಜೆ

ನ್ಯೂಸ್ ನಾಟೌಟ್ : ಕೃಷ್ಣನ ನಗರಿ ಉಡುಪಿ ನಗರವು ನಾಳೆ ನವೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಅಂತಿಮ ಸಿದ್ಧತೆ ಮತ್ತು ಭದ್ರತೆ ಮಾಡಿಕೊಳ್ಳುತ್ತಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಐತಿಹಾಸಿಕ ಲಕ್ಷ ಕಂಠ ಗೀತಾ ಪಾರಾಯಣ – ಒಂದು ಲಕ್ಷ ಭಕ್ತರಿಂದ ಸಾಮೂಹಿಕ ಭಗವದ್ಗೀತೆ ಪಠಣಕ್ಕಾಗಿ ಸಿದ್ಧತೆಗಳು ಸಡಗರದಿಂದ ಕೂಡಿದೆ. ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಗೀತಾ ಪಠಣವು ಮಠದಲ್ಲಿ ಪವಿತ್ರ ಅಲಂಕಾರಗಳ ಅನಾವರಣದೊಂದಿಗೆ ಗರ್ಭಗುಡಿಯ ಮುಂಭಾಗದಲ್ಲಿರುವ ತೀರ್ಥ ಮಂಟಪಕ್ಕೆ ಚಿನ್ನದ ಹೊದಿಕೆ ಮತ್ತು ಕನಕನ ಕಿಂಡಿಗೆ ಚಿನ್ನದ ಹೊದಿಕೆ (ಕನಕ ಕವಚ) ಮಾಡಲಾಗುತ್ತದೆ.

ಆಯೋಜಕರ ಪ್ರಕಾರ, ಗೀತಾ ಪಠಣವು ಬೆಳಗ್ಗೆ 10 ರಿಂದ ಮಧ್ಯಾಹ್ನ 12:30 ರವರೆಗೆ ನಡೆಯಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ಈ ಸಾಮೂಹಿಕ ಪಠಣವು ಗೀತೆಯ ಜ್ಞಾನವನ್ನು ಶ್ರೀಕೃಷ್ಣನಿಗೆ ಅರ್ಪಿಸುವ ಪರಿಕಲ್ಪನೆಯಾಗಿದೆ.

ಕಾರವಾರ, ಶಿವಮೊಗ್ಗ, ಹಾಸನ ಮತ್ತು ಕಾಸರಗೋಡು ಸೇರಿದಂತೆ ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಭಕ್ತರು ಮತ್ತು ಯಾತ್ರಿಕರು ನಾಳೆ ಉಡುಪಿಯಲ್ಲಿ ಸೇರುವ ನಿರೀಕ್ಷೆಯಿದೆ. ಉಡುಪಿ ಪಟ್ಟಣ, ಮಲ್ಪೆ ಮತ್ತು ಮಣಿಪಾಲ ಪೊಲೀಸ್ ವ್ಯಾಪ್ತಿಯ ಪ್ರೌಢಶಾಲಾ ಹಂತದವರೆಗಿನ ಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ. ಸಾರ್ವಜನಿಕರು ನಿರ್ದೇಶನಗಳು ಮತ್ತು ಭದ್ರತಾ ಶಿಷ್ಟಾಚಾರಗಳೊಂದಿಗೆ ಸಹಕರಿಸುವಂತೆ ಅಧಿಕಾರಿಗಳು ಕೋರಿದ್ದಾರೆ.

ಪೊಲೀಸ್ ಬಿಗಿ ಭದ್ರತೆ

ಭದ್ರತಾ ವ್ಯವಸ್ಥೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ದಾವಣಗೆರೆ, ಮೈಸೂರು, ಬೆಂಗಳೂರು ಶಿವಮೊಗ್ಗ ಜಿಲ್ಲೆಗಳಿಂದ 3000ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದ್ದು, 10 ಎಸ್ಪಿ, 27 ಡಿವೈಎಸ್ಪಿ, 49 ಇನ್ಸ್ಪೆಕ್ಟರ್, 127 ಎಸ್ ಐ, 232 ಎ ಎಸ್ ಐ, 1608 ಪಿಸಿ, 39 ಡಬ್ಲ್ಯೂ ಪಿ ಸಿ , 48 ಬಿಡಿಡಿಎಸ್ ಟೀಂ, ಆರು ksrp, ಆರು ಕ್ಯೂಆರ್‌ಟಿ ಟೀಮ್ ನಿಯೋಜನೆ ಮಾಡಲಾಗಿದೆ. ರೋಡ್ ಶೋ ಮಾರ್ಗದುದ್ದಕ್ಕೂ ಪೊಲೀಸರಿಂದ ನಿರಂತರ ತಪಾಸಣೆ ನಡೆಯಲಿದ್ದು, ನಗರದ ಎಲ್ಲಾ ಕಡೆ ಬಾಂಬ್ ಸ್ಕ್ವಾಡ್​ಗಳಿಂದ ಪರಿಶೀಲನೆ ನಡೆಯುತ್ತಿದೆ.

Related Articles

LEAVE A REPLY

Please enter your comment!
Please enter your name here

Latest Articles