21.6 C
Sullia
Sunday, March 8, 2026

ಭೀಕರ ಅಪಘಾತ: ಖಾಸಗಿ ಬಸ್ ಗಳ ಮುಖಾಮುಖಿ ಢಿಕ್ಕಿ; 6 ಸಾವು, 39 ಮಂದಿಗೆ ಗಾಯ

ನ್ಯೂಸ್ ನಾಟೌಟ್ : ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ, ಎರಡು ಖಾಸಗಿ ಬಸ್ ಗಳು ಮುಖಾಮುಖಿ ಢಿಕ್ಕಿಯಾಗಿ ಕನಿಷ್ಠ 6 ಮಂದಿ ಸಾವನ್ನಪ್ಪಿ 39 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ತಮಿಳುನಾಡಿನ ತೆಂಕಸಿ ತೆಂಕಸಿಯಿಂದ 15 ಕಿ.ಮೀ ದೂರದಲ್ಲಿರುವ ದುರೈಸಾಮಿಯಾಪುರಂ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಎರಡು ಖಾಸಗಿ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿದೆ. ಢಿಕ್ಕಿ ಹೊಡೆದ ಪರಿಣಾಮ ಬಸ್ ಗಳಲ್ಲಿದ್ದ ಕನಿಷ್ಠ ಆರು ಮಂದಿ ಸಾವು, 39 ಮಂದಿಗೆ ಗಾಯವಾಗಿದೆ.

ತಿರುಮಂಗಲಂ – ಶೆಂಗೊಟ್ಟೈ ರಾಷ್ಟ್ರೀಯ ಹೆದ್ದಾರಿ ರಸ್ತೆಯ ದುರೈಸಾಮಿಯಾಪುರಂ ಬಳಿ ತೆಂಕಸಿಯಿಂದ ಕಡಯನಲ್ಲೂರ್‌ಗೆ ಹೋಗುತ್ತಿದ್ದ ಖಾಸಗಿ ಬಸ್ ಮತ್ತು ಮಧುರೈನಿಂದ ತೆಂಕಸಿಗೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಇನ್ನೊಂದು ಬಸ್ ಪರಸ್ಪರ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ಪರಿಣಾಮವಾಗಿ ಎರಡೂ ಬಸ್‌ಗಳು ತೀವ್ರವಾಗಿ ಹಾನಿಗೊಳಗಾದವು ಮತ್ತು ಆರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಮೂವತ್ತೊಂಬತ್ತು ಪ್ರಯಾಣಿಕರನ್ನು ತೆಂಕಾಸಿ ಜಿಲ್ಲಾ ಸರ್ಕಾರಿ ಕೇಂದ್ರ ಆಸ್ಪತ್ರೆಗೆ ದಾಖಲಿಸಲಾಯಿತು.

Related Articles

LEAVE A REPLY

Please enter your comment!
Please enter your name here

Latest Articles