37.4 C
Sullia
Sunday, March 8, 2026

300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಬಾಲಿವುಡ್ ನ ಹಿರಿಯ ನಟ ಇನ್ನಿಲ್ಲ,

ನ್ಯೂಸ್ ನಾಟೌಟ್ : ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ (Actor Dharmendra) ಇಂದು ನಿಧನರಾದರು. ಅವರು ಹಲವು ದಿನಗಳಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಕೆಲವು ದಿನಗಳ ಹಿಂದೆ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನವೆಂಬರ್ 10 ರಂದು ಧರ್ಮೇಂದ್ರ ಅವರ ಆರೋಗ್ಯ ಗಮನಾರ್ಹವಾಗಿ ಹದಗೆಟ್ಟಿತ್ತು. ಧರ್ಮೇಂದ್ರ ಅವರಿಗೆ 89 ವರ್ಷವಾಗಿತ್ತು


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಇಂದು ಬೆಳಗ್ಗೆ ಧರ್ಮೇಂದ್ರ ನಿಧನರಾಗಿದ್ದು, ದೇಶಾದ್ಯಂತ ಶೋಕದ ಅಲೆ ಎಬ್ಬಿದೆ. ಅವರ ಅಗಲಿಕೆಯಿಂದ  ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಹೇಮಾ ಮಾಲಿನಿ ಮತ್ತು ಇಶಾ ಡಿಯೋಲ್ ಬಿಳಿ ಬಟ್ಟೆ ಧರಿಸಿ ಕಾಣಿಸಿಕೊಂಡರು. ಧರ್ಮೇಂದ್ರ ಅವರ ಅಂತ್ಯಕ್ರಿಯೆಯನ್ನು ವಿಲೇ ಪಾರ್ಲೆಯ ಸ್ಮಶಾನದಲ್ಲಿ ನಡೆಸಲಾಯಿತು. ಅವರ ಹಿರಿಯ ಮಗ ಸನ್ನಿ ಡಿಯೋಲ್ ಅವರು ಅಂತ್ಯಕ್ರಿಯೆಯ ಚಿತೆಗೆ ಬೆಂಕಿ ಹಚ್ಚಿದರು.

Related Articles

LEAVE A REPLY

Please enter your comment!
Please enter your name here

Latest Articles