written by: ಶ್ರೀಮತಿ ಕೃತಿಕಾ, ಕನಕಮಜಲು, ವಿಶೇಷ ಶಿಕ್ಷಕಿ , ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ
ಮಕ್ಕಳ ಮನಸ್ಸು ತುಂಬಾ ಮೃದು. ಅಮ್ಮ ಎಂದು ಕೂಗುತ್ತಾ ಹೊರ ಜಗತ್ತಿಗೆ ಬಂದ ಮಗುವಿನ ಮನಸ್ಸು ತಿಳಿ ಹಾಳೆ ಇದ್ದಂತೆ. ತಿಳಿ ಹಾಳೆಯನ್ನು ತುಂಬಿಸುವ ಕೆಲಸ ಪೋಷಕರದ್ದು, ನೆರೆಹೊರೆಯವರದ್ದು, ಗುರು ಹಿರಿಯರದ್ದು ಮತ್ತು ಸಮಾಜ ಬಾಂಧವ ರದ್ದು. ಮಗುವಿಗೆ ಹೇಗೆಲ್ಲಾ ಅನುಭವ ಆಗಿಹೋಗುತ್ತದೆ. ಆ ರೀತಿಯಲ್ಲಿ ದಿನಕಳೆದಂತೆ ಅದೇ ಮನಸ್ಥಿತಿಗೆ ಮಗು ಬಂದು ತಲುಪುತ್ತದೆ .
ಇದು ಸಾಮಾನ್ಯ ಮಕ್ಕಳ ಮನಸ್ಥಿತಿ. ಆದರೆ ವಿಶೇಷಚೇತನ ಮಗು ಒಂದು ಸಂಸಾರದಲ್ಲಿ ಹುಟ್ಟಿತು ಅಂದಕೂಡಲೇ ಸಮಾಜದ ದೃಷ್ಟಿಕೋನ ಬಂಧು-ಬಾಂಧವರ ದೃಷ್ಟಿಕೋನ ಬೇರೆಯೇ ಇರುತ್ತದೆ .ಈ ಸಂದರ್ಭದಲ್ಲಿ ಮಗುವಿನ ಮನಸ್ಸು ಹಾಗೂ ಹೆತ್ತವರ ತಂದೆತಾಯಿಗಳ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. “ವಿಶೇಷಚೇತನ” ಎಂದ ತಕ್ಷಣ ನೆನಪಿಗೆ ಬರುವುದು ಅವರ ಮುಂದಿನ ದಿನಗಳ ಬಗ್ಗೆ ಚಿಂತನೆ ಹಾಗೂ ವಿಶೇಷ ಚೇತನ ಎಂದು ಒಪ್ಪಿಕೊಳ್ಳಬೇಕಾದ ಪೋಷಕರು ಮಗು ಹುಟ್ಟಿದ ತಕ್ಷಣ ವಿಶೇಷಚೇತನ ಮಗು ಎಂದು ವೈದ್ಯರು ತಿಳಿಸಿದ ಅಂದಿನಿಂದ ಹೆತ್ತವರು ತುಂಬಾ ಗೊಂದಲಕ್ಕೊಳಗಾಗಿ ಸಾಮಾನ್ಯ ಮಕ್ಕಳಂತೆ ಬದುಕಬಲ್ಲ ಎಂಬ ಚಿಂತನೆ ಮಾಡುತ್ತಾ ಹಲವು ದವಾಖಾನೆ ,ಪಂಡಿತರು ಹಾಗೂ ಮೂಢನಂಬಿಕೆ ಯಂತಹ ಕೆಲವೊಂದು ದಾರಿಯನ್ನು ಹಿಡಿದು ನಮ್ಮ ಮಗು ಇವತ್ತಲ್ಲ ನಾಳೆ ಎಲ್ಲರಂತೆ ಸಮಾಜದಲ್ಲಿ ಮಾತನಾಡಬಲ್ಲ ,ನಕ್ಕು ನಲಿಯಬಲ್ಲ ,ಕಲಿಕೆಯಲ್ಲಿ ಪಾಲ್ಗೊಳ್ಳ ಬಲ್ಲ, ಅಪ್ಪ ಅಮ್ಮ ಎಂದು ಕೂಗ ಬಲ್ಲ ಎಂಬ ಶತಪ್ರಯತ್ನ ವನ್ನು ನಡೆಸುತ್ತಾರೆ .ಆದರೂ ಮಗುವಿಗೆ ಇಂದಿನ ಸಮಾಜದಲ್ಲಿ ಸಿಗೋ ಒಂದು ಬೆಲೆ ಅಂದರೆ ಹೆತ್ತವರಿಗೆ ತಿಳಿಯೋದು ಅದರ ನೋವು ವಿಶೇಷ ಚೇತನ ಮಗುವನ್ನು ನೋಡೋ ದೃಷ್ಟಿ ವಿಚಿತ್ರವಾಗಿರುತ್ತದೆ.
ಪ್ರಶ್ನಿಸುವ ಪ್ರಶ್ನೆಗಳು ಇನ್ನು ಕಣ್ಣಲ್ಲಿ ಕಣ್ಣೀರು ಬರುವಂತಹ ಆಗಿರುತ್ತದೆ. ಹೆತ್ತ ತಂದೆ ತಾಯಿಗಳ ಮುಂದೆ ಹಲವು ಹೆಡ್ಡತನ ರೀತಿಯ ಪ್ರಶ್ನೆಗಳು?ಮಗುವನ್ನು ಇನ್ನೊಂದು ಮಗುವಿನ ಜೊತೆ ಹೊಂದಾಣಿಕೆ ಮಾಡಿ ಅವನು ತುಂಬಾ ಚುರುಕಾಗಿದ್ದಾನೆ ?ನಿಮ್ಮ ಮಗು ಯಾಕೆ ಹೀಗೆ !ಎಂದು ಸಭೆ ಸಮಾರಂಭಗಳ ಮಧ್ಯೆಯಲ್ಲಿ ಪ್ರಶ್ನಿಸುವುದು .ಹೆತ್ತವರಿಗೆ ನೋವುಂಟಾಗಿ ಅದೆಷ್ಟು ಮಕ್ಕಳನ್ನು ಮನೆಯ ನಾಲ್ಕು ಗೋಡೆ ಯ ಮಧ್ಯೆಯಲ್ಲಿ ಬಂಧಿಸಲ್ಪಟ್ಟು ಇನ್ನೂ ಅದರ ಕಲಿಕಾ ಮಟ್ಟ ಹಾಗೂ ಸಮಾಜದಲ್ಲಿ ಎಲ್ಲರೊಂದಿಗೆ ಬೆಳೆಯಬೇಕಾದ ಕನಸನ್ನು ನುಚ್ಚುನೂರು ಮಾಡುವಂತಹ ಪರಿಸ್ಥಿತಿ ಬಂದೊದಗಿದೆ .ಇದಕ್ಕಾಗಿ ಅದೆಷ್ಟು ಸರಕಾರೇತರ ಸಂಘ ಸಂಸ್ಥೆಗಳು,ವಿಶೇಷ ಶಾಲೆಗಳು, ಪುನರ್ವಸತಿ ಕೇಂದ್ರಗಳು ,ಸಮನ್ವಯ ಶಿಕ್ಷಣ ಕೇಂದ್ರಗಳು ಹುಟ್ಟಿಕೊಂಡಿದೆ. ಇದರಲ್ಲಿ ಆ ಮಕ್ಕಳಿಗಾಗಿ ತರಬೇತಿ ಹೊಂದಿದ ವಿಶೇಷ ತರಬೇತುದಾರರಾದ ಶಿಕ್ಷಕರು ಇದ್ದಾರೆ. ಈ ಮುಗ್ಧ ಮನಸ್ಸುಗಳೊಂದಿಗೆ ಮುಗ್ಧರಾಗಿ ಅವರ ಕೌಶಲ್ಯಗಳನ್ನು ಹೊರಹಾಕಿ ಅವರನ್ನು ಎಲ್ಲರಂತೆ ಬಾಳಿ ಬದುಕಲು ಬೆಂಬಲವನ್ನು ನೀಡುವಂತಹ ವರು ಇದ್ದಾರೆ. ಈ ಮಕ್ಕಳು ಕೂಡ ಶಿಕ್ಷಣದಲ್ಲಿ ಮುಂದುವರಿಯಬಹುದು ದಿನನಿತ್ಯದ ಕೌಶಲ್ಯದಲ್ಲಿ ಸಾಮಾನ್ಯರಂತೆ ಬಾಳಿ ಬದುಕಬಹುದು ,ಕ್ರೀಡೆ, ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮ ಕೀರ್ತಿಪತಾಕೆಯನ್ನು ಮುಡಿಗೇರಿಸಿಕೊಳ್ಳ ಬಹುದು. ದೇಶಕ್ಕೆ ಕೀರ್ತಿ ತಂದ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತದ ಹೆಸರನ್ನು ಎಲ್ಲರಿಗೂ ಮಾದರಿ ಮಾಡಿದ H. Nಗಿರೀಶ್, ದೀಪಾ ಮಲ್ಲಿಕ್, ಅದಲ್ಲದೆ ಹಲವಾರು ಕ್ಷೇತ್ರಗಳಲ್ಲಿ ಹೆಸರು ಮಾಡಿದಂತಹ ಹೆಲೆನ್ ಕೆಲರ್, ಪಂಡಿತ್ ಪುಟ್ಟರಾಜ ಗವಾಯಿ, IASಕೆಂಪಾ ಹೊನ್ನಯ್ಯ ಇವರೆಲ್ಲರೂ ವಿಶೇಷಚೇತನ ರಾಗಿದ್ದು ಕೊಂಡೆ ಸಾಧನೆ ಮಾಡಿದ ಸಾಧಕರು .ನಮಗೆಲ್ಲ ಸ್ಪೂರ್ತಿದಾಯಕರು ಆದರೆ ಅವರೊಂದಿಗೆ ಮನಸ್ಸನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ .ನಮ್ಮಲ್ಲಿ ತಾಳ್ಮೆ ,ಸಹನೆ ,ಸಹಕಾರ, ಮಾರ್ಗದರ್ಶನ ಇದ್ದರೆ ಯಾವ ದೇಹದ ಅಂಗಾಂಗಗಳನ್ನು ಕಳೆದುಕೊಂಡಿದ್ದರು ಅದನ್ನೆಲ್ಲ ಮೆಟ್ಟಿ ನಿಲ್ಲುವಷ್ಟು ಶಕ್ತರಾಗಿ ರುತ್ತಾರೆ .ಇವರೆಲ್ಲರೂ ದೇವರ ಮಕ್ಕಳು ಇವರಿಗೆ ನಮ್ಮ ಅನುಕಂಪ ಬೇಡ ಅವಕಾಶ ಸಾಕು.