37.4 C
Sullia
Sunday, March 8, 2026

ಈ ಕೋಳಿಗಿರೋದು ಎರಡು ಕಾಲಲ್ಲ ನಾಲ್ಕು ಕಾಲು!ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​

ನ್ಯೂಸ್ ನಾಟೌಟ್ :ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಶಿರೂರು ತಾಲೂಕಿನ ಶಿಕ್ರಾಪುರ ಗ್ರಾಮದಲ್ಲಿ ನಾಲ್ಕು ಕಾಲಿನ ಕೋಳಿ ಪತ್ತೆಯಾಗಿದ್ದು ಅಚ್ಚರಿಗೆ ಕಾರಣವಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ ನೂರಾರು ಜನ ಈ ಹಳ್ಳಿಯತ್ತ ಬಂದಿದ್ದಾರೆ. ನಾಲ್ಕು ಕಾಲಿನ ಕೋಳಿಯ ದೃಶ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಪ್ರತಿ ಮನೆಯಲ್ಲೂ ಈ ಕೋಳಿಯ ಬಗ್ಗೆ ಚರ್ಚೆಯಾಗುತ್ತಿದೆ. ಬೇರೆ ಊರಿನಿಂದಲ್ಲೂ ಈ ಕೋಳಿಯನ್ನು ನೋಡಲು ಬರುತ್ತಿದ್ದಾರೆ.

ಮಾಹಿತಿಯ ಪ್ರಕಾರ, ಶಿಕ್ರಾಪುರದ ಸಿಕಂದರ್ ಶೇಖ್ ಎಂಬುವವರ ಕೋಳಿ ಅಂಗಡಿಯಲ್ಲಿ ಈ ಕೋಳಿ ಪತ್ತೆಯಾಗಿದೆ. ಪ್ರತಿದಿನ ಬೆಳಿಗ್ಗೆ ಬಾಯ್ಲರ್ ತಳಿಯ ಕೋಳಿಗಳು ಅವರ ಅಂಗಡಿಗೆ ಮಾರಾಟಕ್ಕೆ ಬರುತ್ತವೆ. ಆದರೆ ಈ ಬಾರಿ ಬಂದಿರುವ ಈ ನಾಲ್ಕು ಕಾಲಿನ ಕೋಳಿಯಿಂದ ಅಂಗಡಿಗೆ ಬರುವ ಪ್ರತಿಯೊಬ್ಬ ಗ್ರಾಹಕರ ಗಮನ ಸೆಳೆದಿದೆ.

Related Articles

LEAVE A REPLY

Please enter your comment!
Please enter your name here

Latest Articles