27.7 C
Sullia
Sunday, March 8, 2026

ಚೀನಾದಿಂದ ಬಿಗ್ ಬ್ರೇಕಿಂಗ್ ನ್ಯೂಸ್, ಮನುಷ್ಯರು 150 ವರ್ಷ ಬದುಕುವ ಮಾತ್ರೆ ಅಭಿವೃದ್ಧಿ!!!

ನ್ಯೂಸ್ ನಾಟೌಟ್ : ವಿಶ್ವದಾದ್ಯಂತ ಭಾರೀ ಕುತೂಹಲ ಮತ್ತು ಅನುಮಾನಗಳಿಗೆ ಚೀನಾ ಕಾರಣವಾಗಿದೆ. ಶೆನ್ಜೆನ್ ಮೂಲದ ಬಯೋಟೆಕ್ ಕಂಪನಿಯು (Shenzhen-based biotechnology) ಭವಿಷ್ಯದಲ್ಲಿ ಮನುಷ್ಯರು 150 ವರ್ಷಗಳವರೆಗೆ ಬದುಕಲು ಸಾಧ್ಯ ಎನ್ನುವ ಮಾತ್ರೆ ಅಭಿವೃದ್ಧಿ ಪಡಿಸಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಇದು ಬಾರಿ ಅಚ್ಚರಿಗೆ ಕಾರಣವಾಗಿದೆ.ಚೀನಾ ಕಂಪನಿಯ ಹೇಳಿಕೆ ಪ್ರಕಾರ.. ಮಾತ್ರೆಯೊಂದನ್ನ ಅಭಿವೃದ್ಧಿಪಡಿಸಲಾಗಿದೆ. ಅದಕ್ಕೆ ವಿಶೇಷ ದೀರ್ಘಾಯುಷ್ಯ ಮಾತ್ರೆ (special longevity pill) ಎಂದು ಹೆಸರಿಟ್ಟಿದ್ದಾರೆ. ಅದು ಮನುಷ್ಯರು ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಜೊತೆಗೆ ಜೀವಿತಾವಧಿಯನ್ನೂ ಹೆಚ್ಚಿಸುತ್ತದೆ. ಇದು ದೇಹದಲ್ಲಿನ ಹಳೆಯ ಮತ್ತು ನಿಷ್ಕ್ರಿಯ ಕೋಶಗಳನ್ನು ಗುರಿಯಾಗಿಸಿ ಕೆಲಸ ಮಾಡಲಿದೆ. ಇದನ್ನು ವಿಜ್ಞಾನಿಗಳು zombie cells ಎಂದು ಕರೆಯುತ್ತಾರೆ.

ವರದಿಗಳ ಪ್ರಕಾರ.. ಮೊದಲು  ಈ ಔಷಧಿಯನ್ನು ಇಲಿಗಳ ಮೇಲೆ ಪ್ರಯೋಗ ಮಾಡಲಾಗಿದೆ. ಇಲಿಗಳ ಒಟ್ಟಾರೆ ಜೀವಿತಾವಧಿಯಲ್ಲಿ 9.4% ಹೆಚ್ಚಳ ಕಂಡುಬಂದಿದೆ. ಚಿಕಿತ್ಸೆಯ ನಂತರ ಅವುಗಳ ಉಳಿದ ಜೀವಿತಾವಧಿ 64% ಕ್ಕಿಂತ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Latest Articles