ನ್ಯೂಸ್ ನಾಟೌಟ್: ಕೊಡಗು ಸಂಪಾಜೆಯ ಚಡಾವು ಶ್ರೀಲಕ್ಷ್ಮೀ ಬಾಲ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ನ.25ಕ್ಕೆ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳದಿಂದ ಶ್ರೀತುಳಸಿ ಅದ್ದೂರಿ ಯಕ್ಷಗಾನ ಬಯಲಾಟ ನಡೆಯಲಿದೆ. ಸಂಜೆ 6ರಿಂದ ಯಕ್ಷಗಾನ ನಡೆಯಲಿದೆ. ಇದಕ್ಕೂ ಮೊದಲು ಬೆಳಗ್ಗೆ 8.30ಕ್ಕೆ ಮಹಾಗಣಪತಿ ಹವನ, ತಂಬಿಲ ಸೇವೆ ನಡೆಯಲಿದೆ. ರಾತ್ರಿ ಗಂಟೆ 11ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ನ.26ರಂದು ಬೆಳಗ್ಗೆ ಗಣಪತಿ ಹವನ, ಶ್ರೀ ಗಣಪತಿ ಭಜನಾ ತಂಡ ಸುಳ್ಯ ಇವರಿಂದ ನಾಮ ಸಂಕೀರ್ತನೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂರ್ಪಣೆ ನಡೆಯಲಿದೆ.













