21.6 C
Sullia
Sunday, March 8, 2026

ತಮಿಳು ಸರಿಗಮಪದಲ್ಲಿ ಕನ್ನಡತಿಯ ಗಾಯನದ ಮೋಡಿ!ಶಿವಾನಿ ಕಂಚಿನ ಕಂಠಕ್ಕೆ ನಟ ಧನುಷ್ ಫಿದಾ..

ನ್ಯೂಸ್ ನಾಟೌಟ್ : ಕನ್ನಡದ ಶಿವಾನಿ ನವೀನ್ ಸದ್ಯ ತಮಿಳಿನ ಜೀ ವಾಹಿನಿಯ ಸರಿಗಮಪ ಶೋನಲ್ಲಿ ಮಿಂಚುತ್ತಿದ್ದಾರೆ. ಈಕೆ ಹಾಡು ಹಾಡಿದರೆ, ತಲೆದೂಗುವವರೇ ಎಲ್ಲರೂ. ಅಂತಹ ಸ್ಪರ್ಧಿ ತೀರ್ಪುಗಾರರು ಮೆಚ್ಚಿಕೊಂಡ ಶಿವಾನಿ ಇದೀಗ ಸರಿಗಮಪ ಫಿನಾಲೆ ಹಂತ ತಲುಪಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಚಿಕ್ಕಮಗಳೂರಿನ ಹುಡುಗಿ ಶಿವಾನಿ, ಕನ್ನಡದ ‘ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19’ರಲ್ಲಿ ಮೊದಲ ರನ್ನರ್ ಅಪ್ ಆಗಿದ್ದರು. ಕನ್ನಡದಲ್ಲೂ ತಮ್ಮ ಮಧುರ ಹಾಗೂ ವಿಭಿನ್ನವಾದ ಹೈಟೋನ್ ನಿಂದಾಗಿ ವೀಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿ, ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಇದೀಗ 4 ವರ್ಷಗಳ ಬಳಿಕ ಸರಿಗಮಪ ತಮಿಳು ಶೋನಲ್ಲಿ ಶಿವಾನಿ ಮಿಂಚುತ್ತಿದ್ದಾರೆ.

ಶಿವಾನಿ ನವೀನ್ ತಮಿಳು ಸರಿಗಮಪದಲ್ಲಿ ಆಡಿಶನ್ ಕೊಡುವಾಗ ಮೊದಲಿಗೆ ತಮಿಳು ಹಾಡು ಹಾಡಿದ್ದರು. ಬಳಿಕ ವಿಜಯ್ ಪ್ರಕಾಶ್ ಮಾತಿನಂತೆ ‘ಸೋಜುಗಾದ ಸೂಜುಮಲ್ಲಿಗೆ’ ಹಾಡು ಹಾಡಿ ಪ್ರತಿ ತೀರ್ಪುಗಾರರ ಮನ ಗೆದ್ದಿದ್ದರು. ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಹಾಡಿನ ಮೂಲಕವೇ ಶಿವಾನಿ ತಮಿಳು ಸರಿಗಮಪಕ್ಕೆ ಎಂಟ್ರಿ ಕೊಟ್ಟಿದ್ದರು

.
ನಟ ಧನುಷ್ ನಿಂದ ಸಿಕ್ಕಿದೆ ಆಫರ್!

ಟಿಕೆಟ್ ಟು ಫಿನಾಲೆಯಲ್ಲಿ ಶಿವಾನಿ ಮೈಯಾ ಮೈಯಾ ಹಾಡಿ ಶಾಕ್ ನೀಡಿದ್ದರು. ಈ ಹಾಡು ಕೇಳಿ ವೇದಿಕೆಗೆ ಬಂದ ಗಾಯಕಿ ಶ್ವೇತಾ ಮೋಹನ್ ‘ಸೋಜುಗಾದ ಸೂಜು ಮಲ್ಲಿಗೆ ಹಾಡು ಕೇಳಿ ಧನುಷ್ ಸರ್ ಯಾರು ಈ ಗಾಯಕಿ, ಇವರಿಂದ ಹಾಡು ಹಾಡಿಸಬೇಕು ಎಂದಿದ್ದರು ಎನ್ನುವ ಸಂತೋಷದ ಸುದ್ದಿಯನ್ನು ನೀಡಿ, ನಿಮಗೆ ಆದಷ್ಟು ಬೇಗ ಹಾಡುವ ಅವಕಾಶ ಸಿಗಲಿ ಎಂದು ಹಾರೈಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles