ನ್ಯೂಸ್ ನಾಟೌಟ್ : ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ಒಳ್ಳೆಯ ಕಾಮಿಡಿ ಟೈಮಿಂಗ್ ಹೊಂದಿರುವ ಗಿಲ್ಲಿ ನಟ ಹೊಡೆಯುವ ಪಂಚಿಂಗ್ ಡೈಲಾಗ್ಸ್‌ಗೆ ದೊಡ್ಡ ಫ್ಯಾನ್ ಬೇಸ್ ಇದೆ. ವ್ಯಂಗ್ಯವಾಗಿ ಕಾಲೆಳೆಯುವ ಗಿಲ್ಲಿ ನಟ ಮಾತುಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಯಾವುದೇ ತಯಾರಿ ಇಲ್ಲದೆ ಸ್ಪಾಟ್‌ನಲ್ಲೇ ಕಾಮಿಡಿ ಮಾಡುವ ಗಿಲ್ಲಿ ನಟನ ಪ್ರತಿಭೆಗೆ ಅನೇಕರು ಶಹಬ್ಬಾಸ್ ಎಂದಿದ್ದಾರೆ. ಹೀಗಿರುವಾಗಲೇ, ಗಿಲ್ಲಿ ನಟ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಹೋಗಿದೆ.
ಗಿಲ್ಲಿ ನಟ ಬಿಸಿ ನೀರು ಬಕೆಟ್ ಕೇಳಿದಾಗ ರಿಷಾ ಕೊಡಲಿಲ್ಲ.ಬಿಸಿ ನೀರು ಬಕೆಟ್ ತುಂಬಿದ ಕೂಡಲೆ ರಿಷಾ ಬಾಗಿಲು ಹಾಕಿಕೊಂಡರು. ‘’ಬಕೆಟ್ ಕೊಡಲಿಲ್ಲ ಅಂದ್ರೆ ಏನು ಮಾಡ್ತೀನಿ ನೋಡು’’ ಗಿಲ್ಲಿ ನಟ ಎಚ್ಚರಿಕೆ ಕೊಟ್ಟಿದ್ದರು. ತಮ್ಮ ಸ್ನಾನ ಮುಗಿಯುವವರೆಗೂ ರಿಷಾ ಬಕೆಟ್ ಕೊಡಲೇ ಇಲ್ಲ. ಹೀಗಾಗಿ, ರಿಷಾ ಬಟ್ಟೆಗಳನ್ನೆಲ್ಲಾ ಬಾತ್‌ರೂಮ್ ಏರಿಯಾಗೆ ತಂದು ಗಿಲ್ಲಿ ನಟ ಹಾಕಿದ್ದರು. ಅದನ್ನ ಕಂಡು ಕೋಪಗೊಂಡ ರಿಷಾ ಗಿಲ್ಲಿಗೆ ಹೊಡೆದಿದ್ದರು.. ‘ಬಿಗ್ ಬಾಸ್’ ಮನೆಯ ಮುಖ್ಯ ನಿಯಮವನ್ನ ರಿಷಾ ಉಲ್ಲಂಘಿಸಿದ್ದರು. ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗಿಲ್ಲಿ ನಟ ವಿರುದ್ಧ ದೂರು ಕೊಡಲಾಗಿದೆ!
ಗಿಲ್ಲಿ ನಟ ಮೇಲೆ ಯಾಕೆ ದೂರು?
ಸಹ ಸ್ಪರ್ಧಿ ರಿಷಾ ಗೌಡ ಅವರ ಬಟ್ಟೆಗಳನ್ನ ಮುಟ್ಟಿದ ಕಾರಣಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ! ಮಹಿಳೆಯರ ಬಗ್ಗೆ ಗಿಲ್ಲಿ ನಟ ಅವಮಾನಕರ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನ ಅನ್ವಯ ಮಹಿಳಾ ಆಯೋಗ ಫುಟೇಜ್ ಪರಿಶೀಲನೆ ನಡೆಸಿದೆ. ಮೇಲ್ನೋಟಕ್ಕೆ ಗಿಲ್ಲಿ ನಟ ತಪ್ಪಾಗಿ ನಡೆದುಕೊಂಡ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಹೀಗಾಗಿ, ದೂರನ್ನು ಮಹಿಳಾ ಆಯೋಗದ ಲೀಗಲ್ ಟೀಮ್ ಅಭಿಪ್ರಾಯಕ್ಕೆ ಕಳುಹಿಸಲಾಗಿದೆ.













