27.7 C
Sullia
Sunday, March 8, 2026

ಕಚೇರಿಯಲ್ಲಿ ಲವ್​​ ಮಾಡಿದ್ರೆ ಕೆಲಸನೇ ಹೋಗುತ್ತೆ ಜೋಕೆ! ಕಂಪನಿಯ ಹೊಸ ಆದೇಶ,ಪೋಸ್ಟ್ ವೈರಲ್

ನ್ಯೂಸ್ ನಾಟೌಟ್ : ಕೆಲಸ ಮಾಡುವ ಸ್ಥಳಗಳಲ್ಲಿ ಲವ್​ ಮಾಡುವಂತಿಲ್ಲ ಎಂದು ಕಂಪನಿಯೊಂದು ಆದೇಶ ಹೊರಡಿಸಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಕಂಪನಿಯಲ್ಲಿ ಪರಸ್ಪರ ಲವ್​​ ಮಾಡುವುದು ಅಥವಾ ಬೇರೆ ಕಂಪನಿಯರನ್ನು ಪ್ರೀತಿ ಮಾಡುವುದು ತಿಳಿದರೆ, ಅಂತಹ ಉದ್ಯೋಗಿಯನ್ನು ಕೆಲಸದಿಂದ ವಜಾ ಮಾಡಿ ಎಂದು ಕಂಪನಿ ಹೇಳಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಹೊಸದಾಗಿ ಔಪಚಾರಿಕವಾಗಿ ಈ ನಿಯಮವನ್ನು ಕಂಪನಿ ತಂದಿದೆ. ಅಮೆರಿಕ ಕಂಪನಿಯೊಂದು ತನ್ನ ಐದು ರಾಜ್ಯಗಳಲ್ಲಿರುವ ಕಂಪನಿಗಳ ಉದ್ಯೋಗಿಗಳಿಗೆ ಈ ರೂಲ್ಸ್​​​ ಮಾಡಿದೆ. ಕಂಪನಿಯು ಕಾನೂನು ತಂಡದೊಂದಿಗಿನ ಸಭೆಯನ್ನು ಕರೆದು, ಈ ನಿರ್ಧಾರಕ್ಕೆ ಬಂದಿದೆ. ಈ ಪೋಸ್ಟ್​​​ಗೆ ಇದು ಮುಕ್ತಾಯದ ಹೊಸ ರೂಪ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.

ಕಂಪನಿಯ ಒಳಗೆ ಅಥವಾ ಹೊರಗೆ ಯಾರೊಂದಿಗೂ ಸಂಬಂಧವನ್ನು ಹೊಂದಿರಬಾರದು, ಒಂದು ವೇಳೆ ಸಂಬಂಧ ಹೊಂದಿದ್ದರೆ ಕಂಪನಿಗೆ ನೇರವಾಗಿ ಗಮನಕ್ಕೆ ತರಬೇಕು ಎಂದು ಹೇಳಿದೆ. ಕಂಪನಿಗೆ ತಿಳಿಸದೇ ಗುಟ್ಟಾಗಿ ಲವ್​​ ಮಾಡಿದ್ರೆ, ಅಂತಹ ಉದ್ಯೋಗಿಗಳನ್ನು ವಜಾ ಮಾಡಲಾಗುವುದು. ಜತೆಗೆ ಬೇರೆ ಕಂಪನಿಯ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದರೆ ಅದನ್ನು ಮೊದಲೇ ಕಂಪನಿಗೆ ಹೇಳಬೇಕು. ಹೇಳದಿದ್ದರೆ ಅಂತವರನ್ನು ಕೂಡ ಕಂಪನಿಯಿಂದ ವಜಾ ಮಾಡಲಾಗುವುದು. ಇಲ್ಲಿ ಯಾವುದೇ ರಿಯಾಯಿತಿಯನ್ನು ನೀಡಲಾಗುವುದಿಲ್ಲ. ನೇರ ಮನೆ ಕಳಿಸುತ್ತೇವೆ ಎಂದು ಆದೇಶ ನೀಡಿದೆ. ಇದರ ಜತೆಗೆ ಮತ್ತೊಂದು ಮಹತ್ವದ ಆದೇಶ ಕೂಡ ನೀಡಿದೆ. ಕಂಪನಿಯಲ್ಲಿ ಯಾವುದೇ ತೊಂದರೆ ಅಥವಾ ಕಿರುಕುಳ ಉಂಟಾದರೆ ಅದನ್ನು HRಗೆ ಅಲ್ಲ, ಕಾರ್ಪೊರೇಟ್ ವಕೀಲರಿಗೆ ತಿಳಿಸಬೇಕು ಎಂದು ಹೇಳಿದೆ.

Related Articles

LEAVE A REPLY

Please enter your comment!
Please enter your name here

Latest Articles