ನ್ಯೂಸ್ ನಾಟೌಟ್ : ಕರ್ನಾಟಕ ಪಬ್ಲಿಕ್ ಶಾಲೆ, ಪ್ರೌಢ ಶಾಲಾ ವಿಭಾಗ ಗಾಂಧಿನಗರದಲ್ಲಿ, ಕೆವಿಜಿ ಕಾನೂನು ಮಹಾವಿದ್ಯಾಲಯದ ಕಾನೂನು ನೆರವು ಘಟಕದ ವತಿಯಿಂದ ಸಾಮಾಜಿಕ ಮಾಧ್ಯಮದ ಸುರಕ್ಷತೆ ಹಾಗೂ ಕಾನೂನು ಅರಿವು–ನೆರವು ಕಾರ್ಯಕ್ರಮ ನ.14ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಲಕ್ಷ್ಮಿ ವಹಿಸಿದ್ದರು. ಕೆ.ವಿ.ಜಿ. ಕಾನೂನು ಕಾಲೇಜಿನ ಕಾನೂನು ನೆರವು ಘಟಕದ ಸಂಯೋಜಕಿ ರಚನಾ ಕೆ, ಹಿರಿಯ ಶಿಕ್ಷಕರಾದ ಚಿನ್ನಪ್ಪ ಗೌಡ, ಪದ್ಮಿನಿ, ಇಬ್ರಾಹಿಂ ಉಪಸ್ಥಿತರಿದ್ದರು. ಕೆ.ವಿ.ಜಿ. ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ವಿಜಯ್ ಕೆ. ಮಕ್ಕಳ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಮಾಹಿತಿಪೂರ್ಣ ಉಪನ್ಯಾಸ ನೀಡಿದರು.
ಸಂಜಯ್ ಎಚ್.ಆರ್. ಸಾಮಾಜಿಕ ಮಾಧ್ಯಮದ ಸುರಕ್ಷತೆ, ಅದರ ಸರಿಯಾದ ಬಳಕೆ ಹಾಗೂ ಜಾಗೃತಿಯ ಮಹತ್ವವನ್ನು ವಿವರಿಸಿದರು. ಮಂಜುನಾಥ್ ಎಸ್.ಎಸ್. ಸಾಮಾಜಿಕ ಮಾಧ್ಯಮದ ದುಷ್ಪರಿಣಾಮಗಳು ಮತ್ತು ಅದರಿಂದ ತಪ್ಪಿಸಿಕೊಳ್ಳುವ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಒದಗಿಸಿದರು. ಜತೆಗೆ ಕಾನೂನು ನೆರವು ಘಟಕದ ಸದಸ್ಯರು ಕಿರು ನಾಟಕ ಪ್ರದರ್ಶಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಕಾನೂನು ಕಾಲೇಜಿನ ವಿದ್ಯಾರ್ಥಿ ಅನೀಶ ಪ್ರಾರ್ಥಿಸಿದರು. ಕೆ. ಪಿ ಎಸ್ ಶಾಲೆಯ ಶಿಕ್ಷಕಿ ಯಶ್ವಿನಿ ವಂದಿಸಿದರು. ಕೆವಿಜಿ ಕಾನೂನು ಕಾಲೇಜಿನ ವಿದ್ಯಾರ್ಥಿನಿ ರಮ್ಯಾ ಕೆ. ಎಮ್.ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಿಂದ ಸಾಮಾಜಿಕ ಮಾಧ್ಯಮದ ಜವಾಬ್ದಾರಿಯುತ ಬಳಕೆ, ಕಾನೂನು ಅರಿವು ಹಾಗೂ ವೈಯಕ್ತಿಕ ಸುರಕ್ಷತೆಯ ಕುರಿತು ಮಹತ್ವದ ತಿಳಿವಳಿಕೆ ಪಡೆದರು.













