27.7 C
Sullia
Sunday, March 8, 2026

ಮೈಸೂರು: ಕಾಡಿನಿಂದ ನಾಡಿಗೆ ಎಂಟ್ರಿ ಬರೋಬ್ಬರಿ 21 ಹುಲಿಗಳು!!ಡಿಸಿಎಫ್ ಪರಮೇಶ್ ಹೇಳಿದ್ದೇನು?

ನ್ಯೂಸ್ ನಾಟೌಟ್ : ಕಾಡಂಚಿನ ಗ್ರಾಮಗಳಿಗೆ ಬರೋಬರಿ 21 ಹುಲಿಗಳು ಎಂಟ್ರಿಯಾಗಿರುವ ಘಟನೆ ಮೈಸೂರು ಜಿಲ್ಲೆಯಿಂದ ವರದಿಯಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಹೆಚ್‌ಡಿ ಕೋಟೆ, ಸರಗೂರು ಭಾಗದಲ್ಲಿ ಹುಲಿ ಕಾಟ ಹೆಚ್ಚಾಗಿದ್ದು, ಮೂವರು ರೈತರು ಬಲಿಯಾದ ಘಟನೆ ಕೂಡ ನಡೆದಿತ್ತು. ಈ ಬೆನ್ನಲ್ಲೇ ಅರಣ್ಯ ಇಲಾಖೆ ಜನರನ್ನ ಕಾಡಿದ್ದ ಹುಲಿಯನ್ನ ಸೆರೆಹಿಡಿದಿತ್ತು. ಜೊತೆಗೆ ಕಾಡಂಚಿನ ರೈತರ ರಕ್ಷಣೆಗೆ ಹಲವು ಕ್ರಮಗಳನ್ನ ಕೈಗೊಳ್ಳಲು ಮುಂದಾಗಿತ್ತು. ಈ ನಡುವೆ ಬರೋಬ್ಬರಿ 21 ಹುಲಿಗಳು ಎಂಟ್ರಿ ಕೊಟ್ಟಿವೆ. ಡಿಸಿಎಫ್ (Mysuru DCF) ಪರಮೇಶ್ ಈ ಬಗ್ಗೆ ಅಧಿಕೃತ ಮಾಹಿತಿ ಕೊಟ್ಟಿದ್ದಾರೆ.

ಒಟ್ಟು 26 ಹುಲಿಗಳು ಕಾಡಿನಿಂದ ನಾಡಿಗೆ ಬಂದಿದ್ದವು. ಅದರಲ್ಲಿ ಐದು ಹುಲಿಯನ್ನು ಹಿಡಿಯಲಾಗಿದೆ. ಇನ್ನೂ 21 ಹುಲಿ ನಾಡಿನಲ್ಲೇ ಓಡಾಡುತ್ತಿವೆ. ಹೀಗಾಗಿ ಜನರು ಕೂಡ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ ಎಂದು ಡಿಸಿಎಫ್ ಪರಮೇಶ್ ಹೇಳಿದ್ದಾರೆ. 

Related Articles

LEAVE A REPLY

Please enter your comment!
Please enter your name here

Latest Articles