ನ್ಯೂಸ್ ನಾಟೌಟ್: ನಾಗಮಂಗಲದ ಶ್ರೀ ಆಧಿ ಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ನ.10ರಂದು ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ 2025-26ನೇ ಸಾಲಿನ ರಾಜ್ಯಮಟ್ಟದ 14 ವಯೋಮಿತಿಯ ಬಾಲಕಿಯರ ವಿಭಾಗ ಟ್ರೆಡಿಷನಲ್ ( ಸಾಂಪ್ರದಾಯಿಕ) ಯೋಗಾಸನದಲ್ಲಿ ಸುಳ್ಯ ತಾಲೂಕಿನ ಅಡ್ಕಾರಿನ ಸೋನಾ ಅಡ್ಕಾರ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕದೊಂದಿಗೆ ಎಸ್.ಜಿ.ಎಫ್.ಐ (ಸ್ಕೂಲ್ ಗೇಮ್ಸ್ ಫೆಡರೇಶನ್ ಆಪ್ ಇಂಡಿಯಾ) ಯೋಗ ಸ್ಪೋರ್ಟ್ಸ್ ಗೇಮ್ಸ್ ಗೆ ಆಯ್ಕೆಯಾಗಿದ್ದಾಳೆ.
ಈಕೆ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮದ 7ನೇ ತರಗತಿಯಲ್ಲಿ ಓದುತ್ತಿದ್ದು, ಜಾಲ್ಸೂರು ಗ್ರಾಮದ ಶರತ್ ಅಡ್ಕಾರ್ ಹಾಗೂ ಶೋಭಾ ಶರತ್ ಅಡ್ಕಾರ್ ಅವರ ಪುತ್ರಿ. ಈಕೆಗೆ ಸ್ನೇಹಮಹಿ ವಿವೇಕಾನಂದ ಯೋಗ ಕೇಂದ್ರ ಕಡೂರು ಇಲ್ಲಿಯ ಗುರುಗಳಾದ ನವೀನ್ ಕುಮಾರ್ ಕಡೂರು ಅವರು ಯೋಗ ತರಬೇತಿ ನೀಡಿರುತ್ತಾರೆ.













