ನ್ಯೂಸ್ ನಾಟೌಟ್: ದಿವಂಗತ ಕುರುಂಜಿ ವೆಂಕಟರಮಣ ಗೌಡರ ಮೊಮ್ಮಗಳು ಐಶ್ವರ್ಯ ಕೆ.ಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಸುಳ್ಯ ಶಾಖೆಯ ನೂತನ ಅಧ್ಯಕ್ಷೆಯಾಗಿ ನ.13ರಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಶುಶ್ರೂತ ಸಭಾಂಗಣದಲ್ಲಿ ಗುರುವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಂಎ ಸುಳ್ಯ ಶಾಖೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಎಒಎಲ್ಇ (ರಿ) ಸುಳ್ಯ ಇದರ ಅಧ್ಯಕ್ಷರಾಗಿರುವ ಡಾ.ಕೆ.ವಿ ಚಿದಾನಂದ ಅವರು ವಹಿಸಿದ್ದರು. ಜನಪರ ಕಾಳಜಿ ಹೊಂದಿರುವ ವೈದ್ಯ ಡಾ.ಕೆ.ವಿ ಚಿದಾನಂದರ ಎದುರಲ್ಲಿ ಮುದ್ದಿನ ಮಗಳು ಐಶ್ವರ್ಯ ಕೆ.ಸಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿದ್ದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಐಶ್ವರ್ಯ ಅವರು ಪ್ರಸ್ತುತ ವೈದ್ಯರಾಗಿ ಕೆಲಸ ಮಾಡುತ್ತಿದ್ದು ಜೊತೆಗೆ ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಐ.ಎಂ.ಎ ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷ ಹಾಗೂ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಸದಸ್ಯ ಡಾ. ವೀರಭದ್ರಯ್ಯ ಟಿ. ಎ. ಉದ್ಘಾಟಿಸಿದರು. ಐಎಂಎ ಕರ್ನಾಟಕ ರಾಜ್ಯ ಶಾಖೆಯ ಹಿರಿಯ ಉಪಾಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದರು. ವೇದಿಕೆಯಲ್ಲಿ ಐ.ಎಂ.ಎ ಸುಳ್ಯ ಶಾಖೆಯ ನೂತನ ಉಪಾಧ್ಯಕ್ಷೆ ಡಾ. ಅರುಣಾ ಸಿ. ಆರ್ , ಕಾರ್ಯದರ್ಶಿ ಡಾ. ಗೀತಾ ದೊಪ್ಪ, ಖಜಾಂಚಿ ಡಾ. ಸಾಯಿ ಗೀತಾ ಜ್ಞಾನೇಶ್, ಮಾಜಿ ಅಧ್ಯಕ್ಷೆ ಡಾ. ವೀಣಾ ಎನ್ , ಉಪಾಧ್ಯಕ್ಷ ಡಾ. ಕರುಣಾಕರ್ ಕೆ. ವಿ., ಕಾರ್ಯದರ್ಶಿ ಡಾ. ರವಿಕಾಂತ್ ಜಿ. ಓ. ಹಾಗೂ ಖಜಾಂಚಿಗಳು ಡಾ. ಸೌಮ್ಯ ಮತ್ತು ಡಾ. ರಾಜನಿ ಇವರ ಉಪಸ್ಥಿತರಿದ್ದರು. ಎಒಎಲ್ ಇ ಉಪಾಧ್ಯಕ್ಷೆ ಶೋಭಾ ಚಿದಾನಂದ, ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ ನೀಲಾಂಬಿಕೈ ನಟರಾಜನ್, ಕಾರ್ಯದರ್ಶಿ ಹೇಮಾನಾಥ್ ಕೆ.ವಿ, ಮೀನಾಕ್ಷಿ ಹೇಮನಾಥ್, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ ಸಿ ಆರ್ ಭಟ್, ಐ.ಎಂ.ಎ ಸುಳ್ಯ ಶಾಖೆಯ ನೂತನ ಪದಾಧಿಕಾರಿಗಳಾದ ಡಾ ಹಿಮಕರ್, ಡಾ ಶೃತಿ, ಡಾ ಅಪೂರ್ವ ದೊರೆ, ಡಾ ಸುಬ್ರಮಣ್ಯ, ಡಾ ಗಣೇಶ್ ಶರ್ಮ, ಡಾ ರಾಧಾಕೃಷ್ಣ, ಡಾ ಭಾವನಿಶಂಕರ್, ಡಾ ಅಂಜಲಿ ರಾವ್, ಡಾ ಜೆ.ಪಿ ಪಾರೆ, ಡಾ ಭರತ್ ಶೆಟ್ಟಿ, ಡಾ ರಂಜಿತ್ ಕುರುಂಜಿ, ಡಾ ನಂದಕುಮಾರ್, ಡಾ ನಮೃತ, ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.













