27.7 C
Sullia
Sunday, March 8, 2026

ರಶ್ಮಿಕಾ ಮಂದಣ್ಣ ಕೈಗೆ ದೇವರಕೊಂಡ ಸಿಹಿಮುತ್ತು, ನಾಚಿ ನೀರಾದ ಚೆಲುವೆ

ನ್ಯೂಸ್ ನಾಟೌಟ್: ಇತ್ತೀಚೆಗಷ್ಟೇ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಗೆ ಎಂಗೇಜ್ ಮೆಂಟ್ ಆಗಿದೆ ಅನ್ನೋ ಸುದ್ದಿ ಹರಿದಾಡಿತ್ತು.ಇದೀಗ ಎಲ್ಲರ ನಿರೀಕ್ಷೆಯಂತೆ `ದಿ ಗರ್ಲ್ಫ್ರೆಂಡ್’ (The Girlfriend) ಚಿತ್ರದ ಸಕ್ಸಸ್‌ಮೀಟ್ ರಶ್ಮಿಕಾ (Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Devarkonda) ನಡುವಿನ ಪ್ರೇಮ ವಿಚಾರವನ್ನ ಬಯಲು ಮಾಡಿದೆ. ಸಾರ್ವಜನಿಕವಾಗಿ ರಶ್ಮಿಕಾ ಕೈಗೆ ಮುತ್ತು ಕೊಡುವ ಮೂಲಕ ವಿಜಯ್, ತನ್ನ ಜೀವನಸಂಗಾತಿ ರಶ್ಮಿಕಾ ಎನ್ನುವ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ವಿಜಯ್ ಮುತ್ತಿಗೆ ರಶ್ಮಿಕಾ ನಾಚಿ ನೀರಾಗಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಹೈದ್ರಾಬಾದ್‌ನಲ್ಲಿ ನಡೆದ ದಿ ಗರ್ಲ್ಫ್ರೆಂಡ್ ಚಿತ್ರದ ಸಕ್ಸಸ್‌ಮೀಟ್ ಸುದ್ದಿಗೋಷ್ಠಿಗೆ ಅತಿಥಿಯಾಗಿ ವಿಜಯ್ ದೇವರಕೊಂಡ ಆಗಮಿಸಿದ್ದರು. ಈ ವೇಳೆ ರಶ್ಮಿಕಾರನ್ನ ವಿಜಯ್ ಹಾಡಿ ಹೊಗಳಿದ್ದಾರೆ. ರಶ್ಮಿಕಾ ನಿಜಜೀವನದಲ್ಲೂ ಗರ್ಲ್ಫ್ರೆಂಡ್ ಚಿತ್ರದ ನಾಯಕಿ ಪಾತ್ರದ ರೀತಿಯ ಹುಡುಗಿ. ನಾವೆಲ್ಲಾ ತೊಂದರೆ ಕೊಡುವವರ ವಿರುದ್ಧ ತಿರುಗಿ ಬಿದ್ರೆ ರಶ್ಮಿಕಾ ಸಹಿಸಿಕೊಂಡು ತಮ್ಮ ಕೆಲಸದಲ್ಲಿ ತಲ್ಲೀನರಾಗುತ್ತಾರೆ ಎಂದಿದ್ದಾರೆ. ಮದುವೆ ವಿಚಾರ ಅಧಿಕೃತ ಘೋಷಣೆ ಮಾಡದಿದ್ದರೂ ಇಬ್ಬರ ನಡವಳಿಕೆ ಎಲ್ಲವನ್ನೂ ಹೇಳಿದೆ.

Related Articles

LEAVE A REPLY

Please enter your comment!
Please enter your name here

Latest Articles