ನ್ಯೂಯಾರ್ಕ್: ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಕೈವಶವಾದ ಬಳಿಕ ಜಗತ್ತಿನಾದ್ಯಂತ ಅನೇಕ ದೇಶಗಳು ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿವೆ. ಸಾಮಾಜಿಕ ಜಾಲತಾಣ ಲೋಕದ ದಿಗ್ಗಜ ಫೇಸ್ ಬುಕ್ ಇದೀಗ ತಾಲಿಬಾನ್ ಮೇಲೆ ಬಹಿಷ್ಕಾರ ಹೇರಿದೆ. ಫೇಸ್ ಬುಕ್ ತಾಲಿಬಾನ್ ಅನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಿದ್ದು ತಾಲಿಬಾನ್ ನ ಎಲ್ಲಾ ವಿಚಾರಗಳನ್ನು ನಿಷೇಧಿಸಿದೆ. ಅಮೆರಿಕದ ಕಾನೂನಿನ ಅನುಸಾರ ಭಯೋತ್ಪಾದಕ ಸಂಘಟನೆ ಬೆಂಬಲಿಸುವ ಎಲ್ಲಾ ಸರಕನ್ನು ತನ್ನೆಲ್ಲಾ ಪ್ಲಾಟ್ಫಾರಂಗಳಿಂದಲೂ ಕಿತ್ತೊಗೆಯುವುದಾಗಿ ತಿಳಿಸಿದೆ. ‘ಡೇಂಜರಸ್ ಆರ್ಗನೈಸೇಶನ್ ಪಾಲಿಸಿ’ಗಳ ಅಡಿಯಲ್ಲಿ ತಾಲಿಬಾನ್ ಅನ್ನು ನಿಷೇಧಿಸಿದೆ ಎಂದು ಹೇಳಿದೆ. ಅಪಾಯಕಾರಿ ಸಂಘಟನೆಯ ನೀತಿಗಳ ಅಡಿಯಲ್ಲಿ ನಾವು ಅವರನ್ನು ನಮ್ಮ ಸೇವೆಗಳಿಂದ ನಿಷೇಧಿಸಿದ್ದೇವೆ. ಇದರರ್ಥ ನಾವು ತಾಲಿಬಾನ್ ಪರವಾಗಿ ನಿರ್ವಹಿಸುವ ಖಾತೆಗಳನ್ನು ತೆಗೆದುಹಾಕುತ್ತೇವೆ ಮತ್ತು ಇದಲ್ಲದೆ ಅವರನ್ನು ಪ್ರಶಂಸಿಸುವ, ಬೆಂಬಲಿಸುವ ವಿಚಾರಗಳನ್ನು ನಿಷೇಧಿಸುತ್ತೇವೆ ಎಂದು ಹೇಳಿದೆ. ಈ ಸಂಘಟನೆಗೆ ಸಂಬಂಧಿಸಿದ ಯಾವುದೇ ಸರಕಗಳು ತನ್ನ ಪೋರ್ಟಲ್ ಗಳಲ್ಲಿ ಕಂಡುಬಂದರೆ ಕೂಡಲೇ ಅದನ್ನು ಕಿತ್ತೊಗೆಯಲು ಅಫ್ಘನ್ ತಜ್ಞರ ತಂಡವನ್ನೇ ನೇಮಕ ಮಾಡುವುದಾಗಿ ತಿಳಿಸಿದೆ.
- +91 73497 60202
- [email protected]
- November 26, 2024 8:47 PM