ನ್ಯೂಸ್ ನಾಟೌಟ್: ಮೇವು ಹುಡುಕುತ್ತ ಹೊರಟಿದ್ದ ಕರುವೊಂದು ಆಯತಪ್ಪಿ 15 ಅಡಿ ಆಳದ ಬಾವಿಗೆ ಬಿದ್ದ ಘಟನೆ ಸುಳ್ಯ ತಾಲೂಕಿನ ಸೋಣಂಗೇರಿ ಬಸ್ಸು ತಂಗುದಾನದ ಬಳಿ ಸಂಭವಿಸಿದೆ. ಬಳಿಕ ಸ್ಥಳೀಯರು ಸುಳ್ಯ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಪಂದಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಊರವರು ಕರುವನ್ನು ಸುರಕ್ಷಿತವಾಗಿ ಮೇಲಕೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕರು ಸೋಣಂಗೇರಿಯ ಯೋಗಿಶ್ ಎಂಬವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಕಿರಣ್ ಕುಮಾರ್. ಎಸ್, ಸಿಬ್ಬಂದಿಯವರಾದ ಮಹಮ್ಮದ್ ರಫೀಕ್, ಚಂದ್ರಶೇಖರ ನಾಯಕ, ಸಂಜೀವ ಗೌಡ, ಹರ್ಷವರ್ಧನ, ಮೋಹನ್ ಬಾಬು, ಹೊನ್ನಪ್ಪ ಭಾಗವಹಿಸಿದರು.













