27.7 C
Sullia
Sunday, March 8, 2026

ಮದುವೆ ಊಟದಲ್ಲಿ ಬಿರಿಯಾನಿ ಸವಿದವರಿಗೆ ಫುಡ್ ಪಾಯ್ಸನ್..! ನಟ ದುಲ್ಕರ್​ ಸಲ್ಮಾನ್ , ಅಕ್ಕಿ ಕಂಪನಿ ಹಾಗೂ ಅದರ ಮಾಲೀಕನ ವಿರುದ್ಧ ದೂರು

ನ್ಯೂಸ್ ನಾಟೌಟ್: ಅಕ್ಕಿಯಿಂದ ಬಿರಿಯಾನಿ ತಯಾರಿಸಿ ಬಡಿಸಿದ ನಂತರ, ಅದನ್ನು ಸೇವಿಸಿದ ಜನರಿಗೆ ಫುಡ್​ ಪಾಯ್ಸನ್​ ಆಗಿ ಹಲವಾರು ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು ಆರೋಪಿಸಿ ನಟ ದುಲ್ಕರ್​ ಸಲ್ಮಾನ್ ಮತ್ತು ಅಕ್ಕಿಯ ಕಂಪನಿ ಹಾಗೂ ಅದರ ಮಾಲೀಕನ ವಿರುದ್ಧ ದೂರು ದಾಖಲಿಸಲಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ದೂರಿನ ಆಧಾರದ ಮೇಲೆ ಅಕ್ಕಿ ಬ್ರ್ಯಾಂಡ್​ನ ರಾಯಭಾರಿ ದುಲ್ಕರ್ ಸಲ್ಮಾನ್, ಮಾಲೀಕ ಮತ್ತು ಕಂಪನಿಯ ವಿರುದ್ಧ ಪತ್ತನಂತಿಟ್ಟ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ನೋಟಿಸ್ ಕಳುಹಿಸಿದೆ. ಡಿಸೆಂಬರ್ 3 ರಂದು ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಿದೆ.

ಪತ್ತನಂತಿಟ್ಟ ಮೂಲದ ಪಿ.ಎನ್. ಜಯರಾಜನ್ ಸಲ್ಲಿಸಿದ್ದ ದೂರಿನ ಮೇರೆಗೆ ಈ ನೋಟಿಸ್ ನೀಡಲಾಗಿದೆ. ಪತ್ತನಂತಿಟ್ಟದಲ್ಲಿ ಅಡುಗೆ ಸಂಸ್ಥೆ ನಡೆಸುತ್ತಿರುವ ದೂರುದಾರ ಜಯರಾಜನ್​, ಮದುವೆ ಸಮಾರಂಭವೊಂದಕ್ಕಾಗಿ ಬಿರಿಯಾನಿ ತಯಾರಿಸಲು ಅಕ್ಕಿಯನ್ನು ಖರೀದಿಸಿದ್ದರು. ಆದರೆ, ಪ್ಯಾಕಿಂಗ್ ಮೇಲೆ ಪ್ಯಾಕ್​ ಮಾಡಿದ ದಿನಾಂಕವಾಗಲಿ ಅಥವಾ ಎಕ್ಸ್​ಪೈರಿ ಡೇಟ್​ ಆಗಲಿ ನಮೂದಿಸಿರಲಿಲ್ಲ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಕ್ಕಿಯಿಂದ ಬಿರಿಯಾನಿ ತಯಾರಿಸಿ ಬಡಿಸಿದ ನಂತರ, ಅದನ್ನು ಸೇವಿಸಿದ ಜನರಿಗೆ ಫುಡ್​ ಪಾಯ್ಸನ್​ ಆಗಿದೆ. ತಿಂದವರಲ್ಲಿ ಅನೇಕ ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು ಜಯರಾಜನ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ, ಅಕ್ಕಿಯನ್ನು ಮಾರಾಟ ಮಾಡಿದ ಕಂಪನಿಯ ವಿರುದ್ಧ ದೂರು ದಾಖಲಿಸಲಾಗಿದೆ.

ಅಕ್ಕಿಯ ಬ್ರ್ಯಾಂಡ್​ ರಾಯಭಾರಿಯಾಗಿರುವ ದುಲ್ಕರ್ ಸಲ್ಮಾನ್ ಅವರನ್ನು ಈ ಪ್ರಕರಣ ಪ್ರಮುಖ ಆರೋಪಿಯನ್ನಾಗಿ ಮಾಡಿ ದೂರು ದಾಖಲಿಸಲಾಗಿದೆ. ಜಾಹೀರಾತಿನಲ್ಲಿ ದುಲ್ಕರ್ ಸಲ್ಮಾನ್ ಅವರನ್ನು ನೋಡಿದ ನಂತರ ಈ ಅಕ್ಕಿಯನ್ನು ಖರೀದಿಸಿದೆ ಎಂದು ದೂರುದಾರ ಜಯರಾಜನ್​ ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles