37.4 C
Sullia
Sunday, March 8, 2026

ರೈಲು ಹಳಿ ದಾಟುವಾಗ ಎಕ್ಸ್​ಪ್ರೆಸ್ ರೈಲು ಡಿಕ್ಕಿ; ಆರು ಮಹಿಳೆಯರು ಸ್ಥಳದಲ್ಲೇ ಸಾವು..!

ನ್ಯೂಸ್ ನಾಟೌಟ್: ರೈಲಿನಿಂದ ಇಳಿದು ಹಳಿ ದಾಟುತ್ತಿದ್ದಾಗ ಮತ್ತೊಂದು ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾಗಿ ಆರು ಮಹಿಳೆಯರು ಮೃತಪಟ್ಟ ಘಟನೆ ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ಚುನಾರ್ ರೈಲು ನಿಲ್ದಾಣದಲ್ಲಿ ಇಂದು (ನ. 05) ಸಂಭವಿಸಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಚೋಪನ್ ಎಕ್ಸ್‌ಪ್ರೆಸ್ ನಾಲ್ಕನೇ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿತ್ತು. ಅದರಲ್ಲಿಂದ ಇಳಿದ ಪ್ರಯಾಣಿಕರು ಪಾದಚಾರಿ ಸೇತುವೆ ಬಳಸುವ ಬದಲು, ಕೆಲವರು ನೇರವಾಗಿ ಹಳಿಗಳ ಮೇಲೆ ಇಳಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಹಳಿ ದಾಟುವಾಗ ನೇತಾಜಿ ಎಕ್ಸ್‌ಪ್ರೆಸ್ ರೈಲು ಅವರ ಮೇಲೆ ಹರಿದಿದೆ ಎಂದು ಎನ್‌ಸಿಆರ್ ಪ್ರಯಾಗ್‌ರಾಜ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಸಿಂಗ್ ತಿಳಿಸಿದ್ದಾರೆ. 

ಇನ್ನೂ ಘಟನೆ ಕುರಿತಂತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್, ತೀವ್ರ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಕೂಡಲೇ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ತಲುಪಿ ರಕ್ಷಣಾ ಮತ್ತು ಪರಿಹಾರ ಕಾರ್ಯ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. 

Related Articles

LEAVE A REPLY

Please enter your comment!
Please enter your name here

Latest Articles