ನ್ಯೂಸ್ ನಾಟೌಟ್ :ರಾಜ್ಯ ಕಾಂಗ್ರೆಸ್ನಲ್ಲಿ ನವೆಂಬರ್ ಕ್ರಾಂತಿ ಬಿರುಗಾಳಿ ಜೋರಾಗ್ತಿದೆ.ಇಷ್ಟುದಿನ ತಾಳ್ಮೆಯಿಂದ.. ನಗುನಗುತ್ತಲೇ ಉತ್ತರಿಸುತ್ತಿದ್ದ ಸಿಎಂ ಹೈಕಮಾಂಡ್ ಹೇಳಿದ್ದಷ್ಟೇ ಫೈನಲ್ ಅಂತ ಗುಡುಗಿದ್ದರು. ಈ ಬೆನ್ನಲ್ಲೇ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಗ್ಗುಂಜಿ ಮಠದ ವೆಂಕಟೇಶ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಡಿಕೆಶಿ ಜಾತಕದಲ್ಲಿ ರಾಜಲಕ್ಷ್ಮಿ ಯೋಗ ಇದೆ. ನವೆಂಬರ್ 26ರ ಬಳಿಕ ಡಿ.ಕೆ ಶಿವಕುಮಾರ್ (DK Shivakumar) ಸಿಎಂ ಆಗೋದನ್ನ ಯಾರೂ ತಡೆಯೋಕಾಗಲ್ಲ ಅಂತ ಭವಿಷ್ಯ ನುಡಿದಿದ್ದಾರೆ. ನವೆಂಬರ್ 26ರ ಬಳಿಕ ಡಿಕೆಶಿ ಸಿಎಂ ಆಗೋದ್ನ ಯಾರೂ ತಡೆಯಲಾಗದು. ಡಿಕೆಶಿ ಸಿಎಂ ಆದ್ರೂ ಕೇವಲ ಒಂದೂವರೆ ವರ್ಷ ಅಷ್ಟೆ ಅಧಿಕಾರ ಮಾಡೋದು ಅಂತ ಹೇಳಿದ್ದಾರೆ.













