ನ್ಯೂಸ್ ನಾಟೌಟ್: ಸುಳ್ಯದ ಶ್ರೀ ಲಕ್ಷ್ಮೀ ಕಲ್ಕುಡ ಪಟಾಕಿ ಅಂಗಡಿ ದೀಪಾವಳಿ ಪ್ರಯುಕ್ತ ಆಯೋಜಿಸಿದ್ದ ಲಕ್ಕಿ ಕೂಪನ್ ಡ್ರಾ ವನ್ನು ತುಳಸಿ ಪೂಜೆಯ ಶುಭ ಸಂಜೆಯಂದು ಸೋಮವಾರ ನಡೆಸಲಾಯಿತು.
ಸುಳ್ಯದ ಕಲ್ಕುಡ ದೇವಸ್ಥಾನ ಅಧ್ಯಕ್ಷ ಪಿ.ಕೆ. ಉಮೇಶ್ ಸೇರಿದಂತೆ ಹತ್ತು ಮಂದಿ ಗಣ್ಯರಿಂದ ಡ್ರಾವನ್ನು ನಡೆಸಲಾಯಿತು. ಮೊದಲ ಬಹುಮಾನ ಟೀವಿಯನ್ನ ಕೂಪನ್ ನಂಬರ್ 2288 ಪಡೆದುಕೊಂಡಿದೆ. ಎರಡನೇ ಬಹುಮಾನ ಹೋಮ್ ಥಿಯೇಟರ್ ಅನ್ನು ಕೂಪನ್ ನಂಬರ್ 1139 ಗೆದ್ದಿದೆ. 3ನೇ ಬಹುಮಾನವಾದ ಕೂಲರ್ ಅನ್ನು 2204 ಕೂಪನ್ ನಂಬರ್ ಗೆದ್ದುಕೊಂಡಿದೆ.
4ನೇ ಬಹುಮಾನ ಮಿಕ್ಸಿಯು ಕೂಪನ್ ನಂಬರ್ 881 ಪಾಲಾಗಿದೆ. 5ನೇ ಬಹುಮಾನ ಇಂಡೆಕ್ಷನ್ ಸ್ಟವ್ ಕೂಪನ್ ನಂಬರ್ 759ಗೆ ಹೋಗಿದೆ. 6ನೇ ಬಹುಮಾನ ರೆಡಿಯೋ 1306 ಕೂಪನ್ ಸಂಖ್ಯೆ ಪಡೆದುಕೊಂಡಿದೆ. 7ನೇ ಬಹುಮಾನ ಫ್ಯಾನ್ ಕೂಪನ್ ನಂಬರ್ 742 ಪಾಲಾಗಿದೆ. 8ನೇ ಬಹುಮಾನ ಐರನ್ ಬಾಕ್ಸ್ 1438 ಕೂಪನ್ ಸಂಖ್ಯೆ ಗೆದ್ದುಕೊಂಡಿದೆ. 9ನೇ ಬಹುಮಾನ ಕ್ಯಾಟೆಲ್ ಕೂಪನ್ ನಂಬರ್ 1398 ಸಂಖ್ಯೆ ಪಾಲಾಗಿದೆ. 10ನೇ ಬಹುಮಾನ ಹಾಟ್ ಬಾಕ್ಸ್ ಕೂಪನ್ ಸಂಖ್ಯೆ 636 ಗೆದ್ದುಕೊಂಡಿದೆ.
ಅತಿಥಿಗಳಾಗಿ ಸುಳ್ಯದ ಕಲ್ಕುಡ ದೇವಸ್ಥಾನದ ಅಧ್ಯಕ್ಷ ಪಿ.ಕೆ ಉಮೇಶ್, ಶಾರದಾಂಬ ಸೇವಾ ಸಮಿತಿ ಗೌರವಾಧ್ಯಕ್ಷ ಗೋಕುಲ್ ದಾಸ್ , ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಾಫಾ , ಇಂಡಿಯನ್ ನೆವಿಯ ಗಿರೀಶ್ ಪಾಲಡ್ಕ, ಉದ್ಯಮಿ ನಾಸೀರ್ ಕಟ್ಟೆಕ್ಕಾರ್ ಗುರುದತ್ ಶಾಮಿಯಾನ ಮಾಲೀಕ ಗುರುದತ್ ನಾಯಕ್, ಸುಳ್ಯದ ಪಾಪ್ಯುಲರ್ ಬೇಕರಿಯ ಅನುಪ್ ಪೈ, ಪತ್ರಕರ್ತ ಶಿವ ಪ್ರಸಾದ್ ಆಲೆಟ್ಟಿ, ನ್ಯೂಸ್ ನಾಟೌಟ್ ನ ಹೇಮಂತ್ ಸಂಪಾಜೆ, ನಿವೃತ್ತ ಬಿಎಸ್ ಎನ್ ಎಲ್ ನೌಕರ ದೇಜಪ್ಪ ಪೂಜಾರಿ, ಪಟಾಕಿ ಅಂಗಡಿ ಮಾಲಕರಾದ ರವಿಚಂದ್ರ ಕೊಡಿಯಾಲಬೈಲ್, ಸೂರಜ್ ಕೊಡಿಯಾಲ ಬೈಲ್, ಧನರಾಜ್ ಮೇನಾಲ, ಸನತ್ ಶ್ರೀದೇವಿ ಕನ್ ಸ್ಟ್ರಕ್ಷನ್, ಚೈತ್ರಾ ರವಿಚಂದ್ರ, ಪ್ರಿಯಾ ಸೂರಜ್, ಸ್ವಾತಿ ಧನರಾಜ್, ರಮೇಶ್ ಕೊಡಂಕೇರಿ, ಯತಿರಾಜ್ ದೀಟಿಗೆ, ವಸಂತ್ ಕೊಡಿಯಾಲ ಬೈಲ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಮಾತನಾಡಿದ ರವಿಚಂದ್ರ ಕೊಡಿಯಾಲ ಬೈಲ್ ಅವರು, ‘ನ್ಯೂಸ್ ನಾಟೌಟ್ ವಿಡಿಯೋದಿಂದಾಗಿ ಮಳೆಯ ನಡುವೆಯೂ ನಮಗೆ ಒಳ್ಳೆಯ ವ್ಯಾಪಾರ ಆಗಿದೆ. ಸುಳ್ಯದ ಜನರ ಜೊತೆಗೆ ಮಂಗಳೂರು, ಕಲ್ಲಡ್ಕ, ಉಪ್ಪಿನಂಗಡಿಯಿಂದಲೂ ಸಾಕಷ್ಟು ಜನ ಬಂದು ಪಟಾಕಿ ಖರೀದಿಸಿದ್ದಾರೆ. ಹೇಮಂತ್ ಸಂಪಾಜೆ ಮತ್ತು ತಂಡಕ್ಕೆ ಹಾರ್ದಿಕ ಧನ್ಯವಾದಗಳು’ ಎಂದು ತಿಳಿಸಿದರು.













