ನ್ಯೂಸ್ ನಾಟೌಟ್: ನೆಹರೂ ಮೆಮೋರಿಯಲ್ ಕಾಲೇಜಿನ ವಾಣಿಜ್ಯ ವಿಭಾಗ ಮತ್ತು ವಾಣಿಜ್ಯ ಸಂಘಟನೆ ಹಾಗೂ ಐಕ್ಯುಎಸಿ (IQAC) ಸಂಯುಕ್ತ ಆಶ್ರಯದಲ್ಲಿ “ಜಿಎಸ್‌ಟಿ ಸುಧಾರಣೆಗಳು : ಭಾರತದ ಆರ್ಥಿಕತೆಯ ಮೇಲೆ ಪರಿಣಾಮ” ಎಂಬ ವಿಷಯದ ಕುರಿತು ವಿಚಾರಗೋಷ್ಠಿ ಅ.31 ಶುಕ್ರವಾರದಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರು ಡಾ. ರುದ್ರಕುಮಾರ್ ಎಂ.ಎಂ. ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಸದಸ್ಯರಾದ ಭಾಗಿರಥಿ ಮುರುಳ್ಯ ಅವರು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಮಾರ್ಗದರ್ಶನ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಪ್ರಮುಖ ಭಾಷಣವನ್ನು ಬೆಂಗಳೂರಿನ ಹಿರಿಯ ಲೆಕ್ಕ ಪರಿಶೋಧಕರು ವಿಶ್ವನಾಥ್ ಭಟ್ ಅವರು ನೀಡಿದರು. ಅವರು ಜಿಎಸ್‌ಟಿ ಸುಧಾರಣೆಗಳು ಭಾರತದ ಆರ್ಥಿಕ ಪ್ರಗತಿಯಲ್ಲಿ ತಂದಿರುವ ಬದಲಾವಣೆಗಳ ಬಗ್ಗೆ ವಿಶ್ಲೇಷಿಸಿ ಮಾತನಾಡಿದರು.
ಈ ಸಂದರ್ಭ ವೇದಿಕೆಯಲ್ಲಿ
ಕಾರ್ಯಕ್ರಮದ ಸಂಯೋಜಕರಾಗಿ ವಾಣಿಜ್ಯ ಸಂಘದ ಸಂಯೋಜಕಿ ದಿವ್ಯಾ ಟಿ.ಎಸ್, ಐಕ್ಯುಎಸಿ ಸಂಯೋಜಕರಾದ ಡಾ. ಮಮತಾ ಕೆ. ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗಣೇಶ್ ಭಟ್ ಲೆಕ್ಕ ಪರಿಶೋಧಕರು ಸುಳ್ಯ, ಆರ್. ಕೆ ಭಟ್ ಲೆಕ್ಕ ಪರಿಶೋಧಕರು, ವೆಂಕಟ್ ವಳಲಂಬೆ ಬಿ.ಜೆ.ಪಿ ಮಂಡಲ ಅಧ್ಯಕ್ಷರು, ಹೇಮಂತ್ ಕೈಗಾರಿಕೋದ್ಯಮಿಗಳು ಸುಳ್ಯ, ರಂಜಿತ್ ಉದ್ಯಮಿಗಳು ಸುಳ್ಯ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗ ಮುಖ್ಯಸ್ಥರಾದ ರತ್ನಾವತಿ ಡಿ ಸ್ವಾಗತಿಸಿದರು, ಅಂತಿಮ ಬಿ. ಕಾಂ ವಿದ್ಯಾರ್ಥಿನಿ ತುಳಸಿ ಪ್ರಾರ್ಥಿಸಿದರು, ಉಪನ್ಯಾಸಕರಾದ ದಿವ್ಯಾ ಟಿ. ಎಸ್ ವಂದಿಸಿದರು. ದೀಕ್ಷಿತ ಜಿ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಪವನ್ ಅತಿಥಿ ಪರಿಚಯ ವಾಚಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀಧರ್ ವಿ. ಗೀತಾ ಶೆಣೈ ಹಾಗೂ ವಿಭಾಗd ವಿದ್ಯಾರ್ಥಿಗಳಳು ಸಹಕರಿಸಿದರು.













